Monday, December 23, 2024

ಮೈಸೂರು ದಸರಾಗೆ ಆರಂಭದಲ್ಲಿ ವಿಘ್ನ: ಮುರಿದು ಬಿತ್ತು ದೀಪಾಲಂಕಾರ ಕಮಾನು!

ಮೈಸೂರು : ದೀಪಾಲಂಕಾರಕ್ಕೆ ಹಾಕಿದ್ದ ಕಮಾನು ಮುರಿದು ವಿಶ್ವಪ್ರಸಿದ್ದ ಮೈಸೂರು ದಸರಾಗೆ ಆರಂಭದಲ್ಲೆ ವಿಘ್ನ ಎದುರಾಗಿರುವ ಘಟನೆ ನಡೆದಿದೆ.

ಮೈಸೂರು ದಸರಾ ಉತ್ಸವಕ್ಕೆ ಸಿದ್ದತೆ ನಡೆಸುತ್ತಿರುವಾಗಲೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿದ್ಯುತ್​ ದೀಪಾಲಂಕಾರಕ್ಕೆ ಹಾಕಿದ್ದ ಕಮಾನು ಇದ್ದಕ್ಕಿದ್ದಂತೆ ಮುರಿದು ಬಸ್​ಗಳ ಮೇಲೆ ಬಿದ್ದ ಪರಿಣಾಮ ಕೆಎಸ್​ಆರ್​ಟಿಸಿ ಹಾಗು ಖಾಸಗಿ ಬಸ್​ಗಳು ಜಖಂಗೊಂಡಿದ್ದು ಬಸ್​​ ನ ಗಾಜು ಪುಡಿಪುಡಿಯಾಗಿದೆ.

ಇದನ್ನೂ ಓದಿ: ಕಾರಿನ ಗಾಜು ಒಡೆದು ಚಿನ್ನಾಭರಣ ದರೋಡೆ!

ನಗರದ ಮಣಿಪಾಲ್​ ಆಸ್ಪತ್ರೆ ಜಂಕ್ಷನ್​ ಬಳಿ ಘಟನೆ ನಡೆದಿದ್ದು ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ಹಾಗು ಸಾರ್ವಜನಿಕರು ಪರದಾಡುವಂತಾಯಿತು.

ದಸರಾ ಉತ್ಸವಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಅಲಂಕಾರ ಕಾಮಾಗಾರಿ ಚುರುಕುಗೊಂಡಿದೆ. ಈ ನಡುವೆ ಕಮಾನು ನಿರ್ಮಾಣ ಮಾಡುವವರು ತೋರಿರುವ ಬೇಜವಾಬ್ದಾರಿಗೆ ಕಮಾನು ಮುರಿದು ಬಿದ್ದು ಸಮಸ್ಯೆ ಉಂಟಾಗಿದೆ ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES