ಬೆಂಗಳೂರು: ಬೆಂಗಳೂರಿನ 2 ಕಡೆಗಳಲ್ಲಿ ಮಧ್ಯರಾತ್ರಿ ಕಾರ್ಯಾಚರಣೆಗಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 42 ಕೋಟಿ ದುಡ್ಡಿನ ರಾಶಿಯನ್ನು ವಶಕ್ಕೆ ಪಡೆದುಕಂಡಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದ ಎರಡು ಕಡೆಗಳಲ್ಲಿ ತೆರಿಗೆ ವಂಚಕರ ಮನೆಗಳ ಮೇಲೆ ಮಧ್ಯರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್.ಟಿ ನಗರದ ಆತ್ಮಾನಂದ ಕಾಲೋನಿಯ ಬಿಲ್ಡರ್ ಮನೆಯಲ್ಲಿ ಸುಮಾರು 42 ಕೋಟಿ ರೂಗಳು ಮತ್ತೆಯಾಗಿದ್ದು ನೋಟಿನ ರಾಶಿಗಳನ್ನು ಕಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲೇ ಕಾಡೆಮ್ಮೆಗಳ ಹಿಂಡು!: ವಾಹನ ಸವಾರರು ಪರದಾಟ
ನೆನ್ನೆ ಸಂಜೆ ಪೊಲೀಸ್ ಅಧಿಕಾರಿಗಳೊಂದಿಗೆ ಬಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ವರೆಗೂ ಕಾರ್ಯಾಚರಣೆ ನಡೆಸಿ ಮೆನೆಯೊಂದರ ಬೆಡ್ ರೂಂ ಮಂಚದ ಕೆಳಗೆ ಇಟ್ಟಿದ್ದ 23 ಬಾಕ್ಸ್ಗಳಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ ಇದರ ಒಟ್ಟು ಮೊತ್ತ 42 ಕೋಟಿ ಎಂದು ತಿಳಿದುಬಂದಿದೆ. ದುಡ್ಡಿನ ರಾಶಿ ಕಂಡು ಅಧಿಕಾರಿಗಳೇ ಸುಸ್ತಾಗಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ನಿವಾಸ, ಗಣೇಶ ಬ್ಲಾಕ್ ನ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.