Wednesday, January 22, 2025

ಕಿವೀಸ್​ಗೆ 246 ರನ್​​ಗಳ ಸಾಧಾರಣ ಗುರಿ ನೀಡಿದ ಬಾಂಗ್ಲಾ

ಬೆಂಗಳೂರು : ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಹುಲಿಗಳು ಸಾಧಾರಣ ಟಾರ್ಗೆಟ್ ಕಲೆಹಾಕಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ ವಿಶ್ವಕಪ್​-2023 ಟೂರ್ನಿಯ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೋಂಡು 245 ರನ್​ ಗಳಿಸಿತು.

ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾಗೆ ಕಿವೀಸ್ ಬೌಲರ್​ಗಳು ಶಾಕ್ ನೀಡಿದರು. ಲಿಟ್ಟನ್ ದಾಸ್ ಶೂನ್ಯ ಸುತ್ತಿ ಪೆವಿಲಿಯನ್​ನತ್ತ ಮುಖ ಮಾಡಿದರು. ಬಳಿಕ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕರ್ ರಹೀಮ್ ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ಆಸರೆಯಾದರು.

ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ (66) ಅರ್ಧಶತಕ ಸಿಡಿಸಿದರೆ, ನಾಯಕ ಶಕೀಬ್ ಅಲ್ ಹಸನ್ 40 ರನ್​ ಗಳಿಸಿದರು. ಮೆಹಿದಿ ಹಸನ್ ಮಿರಾಜ್ 30, ಮಹಮ್ಮದುಲ್ಲಾ ಅಜೇಯ 41* ರನ್​ ಗಳಿಸಿ ತಂಡ 240 ರನ್​ ಗಡಿದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಿವೀಸ್ ಪರ ಫರ್ಗುಸನ್ 3, ಬೌಲ್ಟ್ ಹಾಗೂ ಹೆಬ್ರಿ ತಲಾ 2, ಸ್ಯಾಂಟ್ನರ್ ಹಾಗೂ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES