ಬೆಂಗಳೂರು : ಮುಂದಿನ 48 ಗಂಟೆಗಳ ಕಾಲ ರಾಜಧಾನಿ ಬೆಂಗಳೂರಿನ ಹಲವೆಡೆ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆಯಾಗಲಿದ್ದು ತೇವ ಭರಿತ ಗಾಳಿ ಬೀಸುವುದರಿಂದ ಎಲ್ಲೆಡೆ ತಂಪು ವಾತಾವರಣ ಇರಲಿದೆ ಶುಕ್ರವಾರದಿಂದ ಮಳೆಯಲ್ಲಿ ತುಸು ಇಳಿಕೆಯಾಗುವ ಸಾಧ್ಯೆತೆ ಇದ್ದು ಅಕ್ಟೊಬರ್ 16 ವರೆಗೆ ತುಂತುರು ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಲಿದೆ.
ಇದನ್ನೂ ಓದಿ: ನೂತನ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ!
ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಬೆಂಗಳೂರಿನ ಹಲವೆಡೆ ಕಳೆದ ರಾತ್ರಿ ಮಳೆಯಾಗಿದ್ದು ನಗರದ ಉತ್ತರಹಳ್ಳಿ 19.5 ಮಿಲಿ ಮೀಟರ್, ವರ್ತೂರು 19.5 ಮಿ.ಮೀ, ಹಂಪಿನಗರ 17 ಮಿ.ಮೀ, ವಿವಿಪುರಂ 16 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ 16 ಮಿ.ಮೀ, ನಾಯಂಡಹಳ್ಳಿ 15ಮಿ.ಮೀ, ಪಟ್ಟಾಭಿರಾಮನಗರ 14.5ಮಿ.ಮೀ, ಸಂಪಂಗಿರಾಮನಗರ 14.5 ಮಿ.ಮೀ, ಕಾಟನ್ ಪೇಟೆ 14.5 ಮಿ.ಮೀ, ಗಾಳಿ ಆಂಜನೇಯ ಟೆಂಪಲ್ ವಾರ್ಡ್ 13.5 ಮಿ.ಮೀ, ವನ್ನಾರಪೇಟೆ 13 ಮಿ.ಮೀ, ಕೆಂಗೇರಿ 10.5 ಮಿ.ಮೀ, ರಾಜರಾಜೇಶ್ವರಿ ನಗರ 10 ಮಿ.ಮೀ ಮಳೆ ದಾಖಲಾಗಿದೆ.