Monday, December 23, 2024

ಹರಿಣಗಳ ವಿರುದ್ಧ ಕಾಂಗರೂಗಳಿಗೆ ಹೀನಾಯ ಸೋಲು

ಬೆಂಗಳೂರು : ವಿಶ್ವಕಪ್​-2023 ಟೂರ್ನಿಯಲ್ಲಿ ಹರಿಣಗಳ ಗೆಲುವಿನ ಓಟ ಮುಂದುವರಿದಿದ್ದು, ಸತತ ಎರಡನೇ ಗೆಲುವು ದಾಖಲಿಸಿತು.

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 134 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಹರಿಣಗಳು ಅಗ್ರಸ್ಥಾನಕ್ಕೇರಿದರು.

312 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 40.5 ಓವರ್​ಗಳಲ್ಲಿ 177 ರನ್​ಗಳಿಗೆ ಸರ್ವಪತನ ಕಂಡಿತು. ಆಸಿಸ್ ಪರ ಮಾರ್ನಸ್​ ಲಬುಶೇನ್ (46) ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್​ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 3, ತಬ್ರೇಝ್ ಶಂಸಿ, ಕೇಶವ್ ಮಹಾರಾಜ್ ಹಾಗೂ ಮಾರ್ಕೊ ಯಾನ್ಸೆನ್ ತಲಾ ಎರಡು ವಿಕೆಟ್ ಪಡೆದರು.

ಆಸಿಸ್​ಗೆ ಸತತ ಎರಡನೇ ಸೋಲು

ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ಸತತ 2ನೇ ಪಂದ್ಯದಲ್ಲೂ ಸೋಲು ಅನುಭವಿಸಿತು. ಇದಕ್ಕೂ ಮುನ್ನ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧವೂ ಮುಗ್ಗರಿಸಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 311 ರನ್​ ಗಳಿಸಿತು. ಹರಿಣಗಳ ಪರ ಡಿ ಕಾಕ್​ ಬೊಂಬಾಟ್ ಶತಕ (109) ಸಿಡಿಸಿದರು. ಮಾಕ್ರಂ 56, ಬಾವುಮಾ 35, ಖ್ಲಾಸೆನ್ 29, ಡಸ್ಸೆನ್ 26 ಹಾಗೂ ಡೇವಿಡ್ ಮಿಲ್ಲರ್ 17 ರನ್​ ಗಳಿಸಿದರು.

RELATED ARTICLES

Related Articles

TRENDING ARTICLES