ಯಾದಗಿರಿ : ಅನ್ನದಾತನಿಗೆ ಮಾಲೀಕನೊರ್ವ ಕೋಟಿ ಕೋಟಿ ಪಂಗನಾಮ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ವಿಶ್ವರಾಧ್ಯ ಟ್ರೇಡರ್ಸ್ ಮಾಲೀಕ ಮಾರುತಿ ಬಲಕಲ್ ಮೋಸ ಮಾಡಿ ಎಸ್ಕೇಪ್ ಆದ ವ್ಯಕ್ತಿ. ತನ್ನ ಬಣ್ಣದ ಮಾತಿನಿಂದ ರೈತರಿಗೆ ಹಣವಿಲ್ಲದ ಖಾತೆಯ ಚೆಕ್ ನೀಡಿ ಪರಾರಿಯಾಗಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಹತ್ತಿ ಕ್ವಿಂಟಾಲ್‌ಗೆ 8ರಿಂದ 9ಸಾವಿರ ರೇಟ್ ಇತ್ತು. ಆಗ ಮಾರುತಿ 150ಕ್ಕೂ ಹೆಚ್ಚು ರೈತರಿಂದ ಹತ್ತಿ ಖರೀದಿಸಿದ್ದಾನೆ.
ಹತ್ತಿ ಖರಿದಿ ಮಾಡುವಾಗ ಹಣ ನೀಡಿರಲಿಲ್ಲ. ಇವತ್ತಲ್ಲ ನಾಳೆ ದುಡ್ಡು ಕೊಡ್ತಾನೆ ಅಂತಾ ರೈತರು ಸುಮ್ನಿನಿದ್ರು. ಆದರೇ ಈತ ಹಣವನ್ನೇ ಕೊಡಲಿಲ್ಲ. ಆಗ ರೈತರು ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಸೆಪ್ಟೆಂಬರ್‌ನಲ್ಲಿ ಚೆಕ್ ಕೊಟ್ಟಿದ್ದಾನೆ.
ಇದನ್ನೂ ಓದಿ: 99 ರೂಪಾಯಿಗೆ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ!
ಆದರೇ, ಅಕೌಂಟ್‌ನಲ್ಲಿ ಹಣವಿಲ್ಲದ ಕಾರಣ ರೈತರಿಗೆ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇತ್ತ ಮಾರುತಿ ಹುಡುಕೋಕೆ ಹೋದ್ರೆ ಆತ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಈಗ ಬೆಳೆಯೂ ಇಲ್ಲ. ಹಣವೂ ಇಲ್ಲದ ಪರಿಸ್ಥಿತಿ ಯಾದಗಿರಿ ರೈತರದ್ದು. ಜಿಲ್ಲೆಯ ಹಾಲಗೇರಾ, ಜೀನಕೇರಾ, ತಾಂಡಾಗಳು, ಹಳಿಗೇರಾ, ಕುರಕುಂದ ಸೇರಿದಂತೆ ಅನೇಕ ಗ್ರಾಮದ ರೈತರ ಬಳಿ ಹತ್ತಿ ಖರೀದಿಸಿ 2.5 ಕೋಟಿಯಷ್ಟು ಮೋಸ ಮಾಡಿದ್ದಾನೆ.