ಬೆಂಗಳೂರು: ನಗರದ ಹಲವೆಡೆ ಅಕ್ಟೋಬರ್ 12ರಿಂದ ನಾಲ್ಕು ದಿನಗಳ ಕಾಲ ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾಹಿತಿ ತಿಳಿಸಿದೆ.
ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿವೆ.
ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಮಿಯೊಳಗೆ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕದ ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24×7 ನೀರು ಸರಬರಾಜು ಕೆಲಸ, ಜಂಪ್‌ಗಳನ್ನು ಬಿಗಿಗೊಳಿಸುವುದು, ಹದಗೆಟ್ಟ ಕಂಬಗಳ ಬದಲಾವಣೆ, ಭೂಮಿಯೊಳಗಿನ ಕೇಬಲ್ ಹಾನಿ ಸರಿಪಡಿಸುವಿಕೆ, ಓರೆಯಾದ ಕಂಬಗಳನ್ನು ನೇರಗೊಳಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ವಿದ್ಯುತ್ ಕಂಪನಿಗಳು ಕೈಗೊಂಡಿದ್ದು ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಎಂ ಕ್ಷೇತ್ರದ ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿ : ವಿದ್ಯುತ್ ಸ್ಥಗಿತ
ವಿದ್ಯುತ್ ಸರಬರಾಜು ಕಂಪನಿಗಳು ಹೆಚ್ಚಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳುವ ಹಿನ್ನೆಲೆ ಈ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.