Monday, December 23, 2024

ಗಂಡ ಹೋದ್ಮೇಲೆ ಹೆಂಡತಿ ಹೋಗಲೇ ಬೇಕಲ್ವಾ? : ಪೂರ್ಣಿಮಾ ಶ್ರೀನಿವಾಸ್

ತುಮಕೂರು : ಗಂಡ ಹೋದ ಮೇಲೆ ಹೆಂಡತಿ ಹೋಗಲೇ ಬೇಕಲ್ವಾ? ಸೋ ನಾನು ಹೋಗ್ತೀನಿ. ಅಕ್ಟೋಬರ್ 20ನೇ ತಾರೀಖು ಕಾಂಗ್ರೆಸ್ ಪಾರ್ಟಿ ಸೇರ್ಪಡೆ ಆಗ್ತೇವೆ. ಕೆಪಿಸಿಸಿ ಪಾರ್ಟಿ ಕಚೇರಿಯಲ್ಲೇ ಸೇರ್ಪಡೆ ಆಗ್ತೀವಿ ಎಂದು ಮಾಜಿ ಶಾಸಕ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ತುಮಕೂರಿನಲ್ಲಿ ಪತಿ ಡಿ.ಟಿ. ಶ್ರೀನಿವಾಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದಿಂದ ಡಿ.ಟಿ. ಶ್ರೀನಿವಾಸ್ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೆ. ಕಾಂಗ್ರೆಸ್ ಪಾರ್ಟಿಯಿಂದ ಸ್ಪರ್ಧೆ ಮಾಡ್ತಾರೆ. ನಿನ್ನೆ ಹಿರಿಯೂರಲ್ಲಿ ಒಂದು ಸಭೆ ಮಾಡಿದ್ದೇವೆ. ಅದೇ ರೀತಿ ಇವತ್ತು ತುಮಕೂರಲ್ಲಿ ಸಭೆ ಮಾಡಿ ಸಹಮತ ಕೋರಲಿಕ್ಕೆ ಬಂದಿದ್ದೇವೆ ಎಂದರು.

ಚುನಾವಣೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ಮಾತನಾಡಿದ್ರು. ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಸ್ಥಾನ ಕೊಡ್ತೀವಿ ಅಂದಿದ್ರು. ಸೋತ ಬಳಿಕ ಸಹ ಪಕ್ಷಕ್ಕೆ ಕರೆದಿದ್ರು. ಬಿಜೆಪಿಯಲ್ಲಿ ನಮ್ಮ ಸಮುದಾಯಕ್ಕೆ ಮಹತ್ವ ನೀಡಲಿಲ್ಲ. ಸಮುದಾಯದ ಬೇಡಿಕೆಗಳಿಗೆ ಅವಕಾಶ ಕೊಡಲಿಲ್ಲ. ಹಾಗಾಗಿ, ಪಕ್ಷಕ್ಕೆ ತೊರೆಯುವುದು ಅನಿವಾರ್ಯ ಎಂದ ತಿಳಿಸಿದರು.

ಸಿಎಂ ಟಿಕೆಟ್ ಕೊಡ್ತೀವಿ ಅಂದಿದ್ದಾರೆ

ಡಿ.ಟಿ. ಶ್ರೀನಿವಾಸ್ ಮಾತನಾಡಿ, ನಮ್ಮಿಬ್ಬರ ಜೊತೆಯಲ್ಲಿ ಎಂಟು ಜನ ನಗರಸಭಾ ಸದಸ್ಯರು, ಮಾಜಿ ಜಿ.ಪಂ., ತಾ.ಪಂ. ಸದಸ್ಯರುಗಳು, ಪ್ರವರ್ಗ 1 ಒಕ್ಕೂಟದ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರುಗಳು ಕಾಂಗ್ರೆಸ್​ ಪಕ್ಷ ಸೇರಲಿದ್ದಾರೆ. ಪಟ್ಟಿ ಸಿದ್ದವಾಗುತ್ತಿದೆ, 200ಕ್ಕೂ ಹೆಚ್ಚು ಜನ ಸೇರ್ಪಡೆ ಆಗಲಿದ್ದಾರೆ. ಮುಖ್ಯಮಂತ್ರಿಗಳು ಟಿಕೆಟ್ ಕೊಡ್ತೀವಿ ಅಂತ ಹೇಳಿದ್ದಾರೆ. ನಾನು ಪಾರ್ಟಿಗೆ ಹೋದ ಮೇಲೆ ಹೇಳ್ತಾರೆ ಅನ್ನಿಸುತ್ತೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES