Friday, April 4, 2025

ಹಮಾಸ್ ಆರ್ಥಿಕ ಸಚಿವ ಏರ್‌ಸ್ಟ್ರೈಕ್‌ನಲ್ಲಿ ಸಾವು!

ಹಮಾಸ್ ಉಗ್ರರ ಮೇಲಿನ ಪ್ರತಿದಾಳಿಯನ್ನು ಇಸ್ರೇಲ್ ಸದ್ಯಕ್ಕೆ ನಿಲ್ಲಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಮಾಸ್ ಉಗ್ರರು, ಪ್ಯಾಲೆಸ್ತಿನ್, ಇರಾನ್ ಸೇರಿದಂತೆ ಕೆಲ ರಾಷ್ಟ್ರಗಳ ಗಂಭೀರ ಎಚ್ಚರಿಕೆ ನಡುವೆಯೂ ಇಸ್ರೇಲ್ ದಾಳಿ ಮುಂದುವರಿಸಿದೆ.

ಈಗಾಗಲೇ ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ಏರ್‌ಸ್ಟ್ರೈಕ್‌ಗೆ ಗಾಜಾ ನಲುಗಿ ಹೋಗಿದೆ. ಈ ಏರ್‌ಸ್ಟ್ರೈಕ್‌ನಲ್ಲಿ ಹಮಾಸ್ ಆರ್ಥಿಕ ಸಚಿವ ಜಾವದ್ ಅಬು ಶಮಾಲ ಹತ್ಯೆಯಾಗಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಗಾಜಾ ಮೇಲಿನ ದಾಳಿಗೆ ಹಮಾಸ್ ಉಗ್ರರು ನಲುಗಿ ಹೋಗಿದ್ದಾರೆ.

ಇದನ್ನೂ ಓದಿ: ಹಮಾಸ್ ಉಗ್ರರಿಂದ 40 ಮಕ್ಕಳ ಶಿರಚ್ಛೇಧ!

ಮತ್ತೊಂದೆಡೆಯಿಂದ ಹಮಾಸ್​ ಇಂಧನ, ಆಹಾರ, ನೀರು, ವಿದ್ಯುತ್ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ಗಾಜಾ ಪಟ್ಟಿಯಲ್ಲಿನ ನಾಗರೀಕರಿಗೆ ದಾಳಿಗೆ ಮೊದಲೇ ಇಸ್ರೇಲ್ ಸೂಚನೆ ನೀಡಲಾಗಿತ್ತು. ನಮ್ಮ ದಾಳಿ ಹಮಾಸ್ ಉಗ್ರರ ವಿರುದ್ಧ. ಹೀಗಾಗಿ ನಾಗರೀಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ನೀಡಿತ್ತು. ಹಮಾಸ್ ಉಗ್ರರ ಪ್ರಮುಖ ಕಟ್ಟಡ, ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಈ ದಾಳಿಯಲ್ಲಿ ಆರ್ಥಿಕ ಸಚಿವ ಕೂಡ ಹತ್ಯೆಯಾಗಿರುವುದಾಗಿ ಸೇನೆ ಹೇಳಿದೆ.

RELATED ARTICLES

Related Articles

TRENDING ARTICLES