Wednesday, January 22, 2025

ಬಣ್ಣ ಹಚ್ಕೊಂಡು ಒಬ್ಬ ಶಾಸಕ ಹೀಗೆಲ್ಲ ಮಾಡಬಾರದು : ಕಾಂಗ್ರೆಸ್ ಶಾಸಕ ಹ್ಯಾರಿಸ್

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್​​​ ಅವರ ಕಾಲಿಗೆಬಿಜೆಪಿ ಶಾಸಕ ಮುನಿರತ್ನಬಿದ್ದಿದ್ದರ ಕುರಿತು ಕಾಂಗ್ರೆಸ್​ ಶಾಸಕ ಎನ್​.ಎ. ಹ್ಯಾರಿಸ್​ ಪ್ರತಿಕ್ರಿಯಿಸಿದ್ದಾರೆ.

ಸದಾಶಿವನಗರದ ಡಿಕೆಶಿ ನಿವಾಸದ ಬಳಿ ಮಾತನಾಡಿದ ಅವರು, ಬಣ್ಣ ಹಚ್ಚಿಕೊಂಡು ಬಂದು ಒಬ್ಬ ಶಾಸಕ ಹೀಗೆಲ್ಲ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ನಾವು ಇವರ ಕಾಲದ ವಿಷಯ ಬಾಯಿಬಿಟ್ಟರೆ ಇವರ ಬಣ್ಣ ಅಳಿಸಿ ಹೋಗುತ್ತದೆ. ಪ್ರೊಡ್ಯೂಸರ್ ಅಲ್ವಾ ಅವರು. ಬಂದು ಕಂಬಳ ಕಾರ್ಯಕ್ರಮ ಹಾಳು ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಭೇಟಿ ಮಾಡೋದಕ್ಕೆ ಒಂದು ಸರಿಯಾದ ಮಾರ್ಗ ಇಲ್ವಾ? ಅಪಾಯಿಟ್ಮೆಂಟ್ ತೆಗೆದುಕೊಂಡು ಬಂದು ಡಿಸಿಎಂನಾ ಭೇಟಿ ಮಾಡಬಹುದಿತ್ತು. ಕಾರ್ಯಕ್ರಮ ನಡೆಯೋ ಜಾಗಕ್ಕೆ ಬಂದು ಹೀಗೆಲ್ಲ ಮಾಡಿದ್ರೆ ಸರಿನಾ ಎಂದು ಪ್ರಶ್ನಿಸಿದ್ದಾರೆ.

ಇವ್ರ ಹೈಡ್ರಾಮಕ್ಕೆ ಜನ ಬೇಜಾರಾಗಿದ್ದಾರೆ

ಇವರ ಕಾಲದಲ್ಲಿ ಅನುದಾನ ಸರಿಯಾಗಿ ಹಂಚಿಕೆ ಮಾಡಿದ್ರಾ? ಡಿ.ಕೆ.ಶಿವಕುಮಾರ್ ಕ್ಷೇತ್ರದ ಮೆಡಿಕಲ್ ಕಾಲೇಜು ತೆಗೆದುಕೊಂಡು ಎಲ್ಲಿಗೆ ಒಯ್ದರು. ಕನಕಪುರದ ಮೆಡಿಕಲ್ ಕಾಲೇಜ್ ತೆಗೆದುಕೊಂಡು ಹೋಗಿ ಚಿಕ್ಕಬಳ್ಳಾಪುರಕ್ಕೆ ಹಾಕಿರಲಿಲ್ವಾ? ಇವರ ಹೈಡ್ರಾಮಕ್ಕೆ ಕರಾವಳಿ ಭಾಗದ ಜನರೆಲ್ಲ ಬೇಜಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES