Sunday, April 28, 2024

ಲಂಕಾ ದಹನ..! ಪಾಕಿಸ್ತಾನಕ್ಕೆ 6 ವಿಕೆಟ್​ಗಳ ಭರ್ಜರಿ ಜಯ

ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 8ನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಪಾಕಿಸ್ತಾನ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪಾಕಿಸ್ತಾನಕ್ಕೆ 344 ರನ್​ ಕಲೆಹಾಕಿತ್ತು. 345 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ 48.2 ಓವರ್​ಗಳಲ್ಲಿ ​(10 ಬಾಲ್ ಬಾಕಿ ಇರುವಾಗ) ಗೆಲುವಿನ ನಗಡ ಬೀರಿತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ಚೇಸ್​ ಮಾಡಿದ ತಂಡ ಎಂಬ ದಾಖಲೆ ಬರೆಯಿತು.

ಪಾಕಿಸ್ತಾನ ಪರ ಅಬ್ದುಲ್ಲಾ ಶಫೀಕ್ 113 ಹಾಗೂ ಮೊಹಮ್ಮದ್ ರಿಜ್ವಾನ್ ಅಜೇಯ 131* ಗಳಿಸುವ ಮೂಲಕ ಗೆಲುವಿನ ರೂವಾರಿಗಳಾದರು. ನಾಯಕ ಬಾಬರ್ ಅಜಂ 10, ಶಕೀಲ್ 31, ಅಹ್ಮದ್ ಅಜೇಯ 22 ರನ್​ ಗಳಿಸಿದರು. ಶ್ರೀಲಂಕಾ ಪರ ಮಧುಶಂಕ 2, ತೀಕ್ಷಣ ಹಾಗೂ ಪತೀರಣ ತಲಾ ಒಂದು ವಿಕೆಟ್ ಪಡೆದರು.

ಶಫೀಕ್ ದಾಖಲೆ ಶತಕ

ಪಾಕಿಸ್ತಾನ ಆಟಗಾರ ಅಬ್ದುಲ್ಲಾ ಶಫೀಕ್ ಬೊಂಬಾಟ್ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಭಾರತದ ನೆಲದಲ್ಲಿ ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಮೊದಲ ಪಾಕ್​ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಶ್ರೀಲಂಕಾ ವಿರುದ್ಧ ಡಬ್ಲ್ಯುಸಿಯಲ್ಲಿ ಮೂವರು ಪಾಕಿಸ್ತಾನ ಆಟಗಾರರಾದ ಇಮ್ರಾನ್(102), ಮಿಯಾಂದಾದ್(103), ಮಲಿಕ್ (103*) ಶತಕ ಸಿಡಿಸಿದ್ದಾರೆ. ಈಗ ಆ ಪಟ್ಟಿಗೆ ಶಫೀಕ್ ಸೇರಿಕೋಂಡಿದ್ದಾರೆ. ಇನ್ನೂ ಮೊಹಮ್ಮದ್ ರಿಜ್ವಾನ್ ಸಹ ಬೊಂಬಾಟ್ ಶತಕ ಬಾರಿಸಿದರು.

RELATED ARTICLES

Related Articles

TRENDING ARTICLES