Monday, December 23, 2024

ಡಿ.ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗೋದು ಖಚಿತ : ಕುಮಾರಸ್ವಾಮಿ ಭವಿಷ್ಯ

ರಾಮನಗರ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರು ಮತ್ತೆ ತಿಹಾರ್​ ಜೈಲಿಗೆ ಹೋಗೋದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್​ ಸರ್ಕಾರ ಪತನವಾಗುವುದು ಗ್ಯಾರಂಟಿ. ಡಿ.ಕೆ ಶಿವಕುಮಾರ್​ ತಿಹಾರ್​ ಜೈಲಿಗೆ ಹೋಗೋದು ಖಚಿತ. ನಮ್ಮ ಹಾಸನಕ್ಕೆ ಕಳಿಸಬಹುದು, ಅವರು ತಿಹಾರ್​ಗೆ ಓಡುವ ಕಾಲ ಹತ್ತಿರವಿದೆ. ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್​​ ಜೈಲು ನೋಡಿಕೊಂಡು ಬಂದಿದ್ದಾರೆ. ಅವರು ಶಾಶ್ವತವಾಗಿ ತಿಹಾರ್​ಗೆ ಹೋದರೂ ಅಚ್ಚರಿ ಅಲ್ಲ ಎಂದು ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಎಣ್ಣೆ ಹೊಡೆಯುವುದನ್ನ ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ : ಡಿ.ಕೆ. ಶಿವಕುಮಾರ್

ನನ್ನ ಕೈಯನ್ನು ಮೇಲೆ ಎತ್ತಿ ಜೋಡೆತ್ತು ಎಂದಿದ್ದನ್ನು ಕೇಳಿ ಮೋಸ ಹೋದೆ. ನನ್ನನ್ನು ನಡುರಸ್ತೆಯಲ್ಲಿ ಕೈಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. ಡಿ.ಕೆ.ಶಿವಕುಮಾರ್​ ಅವರಿಂದಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿದ್ದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES