Wednesday, January 22, 2025

ಇಸ್ರೇಲ್-ಪಾಲೆಸ್ತೀನ್ ಸಂಘರ್ಷ, 400 ಜನ ಸಾವು!

ಇಸ್ರೇಲ್​/ಗಾಜಾ : ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ, ಪ್ರತಿದಾಳಿಯಲ್ಲಿ 400 ಜನ ಸಾವನ್ನಪ್ಪಿದ್ದಾರೆ.

ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 198 ಜನರ ಹತ್ಯೆಯಾಗಿದೆ. ಎರಡೂ ಕಡೆಗಳಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಕೆಲವು ಸೈನಿಕರು ಮತ್ತು ನಾಗರಿಕರನ್ನು ಹಮಾಸ್‌ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.

ಇಸ್ರೇಲ್‌ನಲ್ಲಿ ಶನಿವಾರ ಯೆಹೂದಿಗಳ ‘ಯಾಮ್ ಕಿಪ್ಪು‌ ಹಬ್ಬಕ್ಕೆ ರಜೆ ಇತ್ತು. ಈ ಸಂದರ್ಭದಲ್ಲೇ ಭೂ, ಜಲ ಮತ್ತು ವಾಯು ಮಾರ್ಗದ ಮೂಲಕ ಬಂಡುಕೋರರು ದಾಳಿ ಎಸಗಿದ್ದಾರೆ. ದೇಶದ ದಕ್ಷಿಣ ಭಾಗದ ಮೂಲಕ ಒಳ ನುಸುಳಿದ್ದಾರೆ. ಅನೇಕ ಸೈನಿಕರು ಮತ್ತು ಜನರನ್ನು ವಶಕ್ಕೆ ಪಡೆದು ಗಾಜಾ ಪಟ್ಟಿಯತ್ತ ಕರೆದೊಯ್ದಿದ್ದಾರೆ.

ಪ್ಯಾಲೆಸ್ಟೀನಿಯನ್ನರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಇಸ್ರೇಲ್‌ನ ಹಿರಿಯಅಧಿಕಾರಿಗಳು ಸೇರಿ ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದೇವೆ ಎಂದು ಹಮಾಸ್‌ನ ಉಪ ಮುಖ್ಯಸ್ಥ ಸಲೇಹ್ ಅಲ್ ಅ‌‍ರಿ ‘ಅಲ್ ಜಝೀರಾ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES