Sunday, December 22, 2024

ಭಾರತ ಭರ್ಜರಿ ಬೌಲಿಂಗ್​ : 199 ಕ್ಕೆ ಆಸ್ಟ್ರೇಲಿಯಾ ಆಲ್​ಔಟ್​!

ಚನ್ನೈ : ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ 2023 ರಲ್ಲಿ ಭಾರತ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ತಂಡವನ್ನು 199 ಕ್ಕೆ ಕಟ್ಟಿಹಾಕಿದೆ.

ಟಾಸ್​ ಗೆದ್ದು ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು, ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಕೇವಲ 5 ರನ್​ಗಳಿಗೆ ಮಾರ್ಷಲ್​ ಔಟ್​ ಆಗುವ ಮೂಲಕ ಮೊದಲ ಆಘಾತ ಅನುಭವಿಸಿತು. ಬಳಿಕ 16 ನೇ ಓವರ್​ ನಲ್ಲಿ 74 ರನ್​ ಮೊತ್ತಕ್ಕೆ ಡೇವಿಡ್​ ವಾರ್ನರ್​ ವಿಕೆಟ್​ ಪತನವಾಯಿತು.

ಒಟ್ಟು 49.9 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡ 199 ರನ್​ ಗಳನ್ನು ಗಳಿಸುವ ಮೂಲಕ ಭಾರತಕ್ಕೆ 200 ರನ್​ ಗಳ ಟಾರ್ಗೆಟ್​ ನೀಡಿತು.

ಈ ಪಂದ್ಯದಲ್ಲಿ ಭಾರತ 6 ವೈಡ್​ ಮತ್ತು 6 ಲೆಗ್​ ಬೈಸ್ ಗಳೊಂದಿಗೆ ಹೆಚ್ಚುವರಿಯಾಗಿ 12 ರನ್​ಗಳನ್ನು ಆಸ್ಟ್ರೇಲಿಯಾ ತಂಡಕ್ಕೆ ನಿಡಿದೆ.​

RELATED ARTICLES

Related Articles

TRENDING ARTICLES