ಆನೇಕಲ್ : ಅತ್ತಿಬೆಲೆಯಲ್ಲಿರುವ ಪಟಾಕಿ ಗೊಡೌನ್ ನಲ್ಲಿ ನಡೆದ ದುರಂತದಲ್ಲಿ 14 ಜನ ಮೃತ ಪಟ್ಟಿದ್ದು ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ವೇಳೆ ಮೃತ ಪ್ರಭಾಕರನ್ ಸಾವು ಕುರಿತು ತಾಯಿ ಕಣ್ಣೀರು ಹಾಕಿದ್ದಾರೆ. ನನ್ನ ಮಗನ ಜೀವಕ್ಕೆ ಮೂರೆ ಲಕ್ಷ ಬೆಲೆ. ನನಗೆ ಆ ಹಣ ಬೇಡ ಅಂತಾ ತನ್ನ ಮಗನನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಇನ್ನು ಕುಟುಂಬಕ್ಕೆ ಪ್ರಭಾಕರ್ ಮೂಲ ಆಧಾರವಾಗಿದ್ದನಂತೆ ಮೊನ್ನೆಯಷ್ಟೆ ಸೆಕೆಂಡ್ ಪಿಯು ಓದಿ ಕೆಲಸಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ತಾಲೂಕಿನ ಅತ್ತಿಬೆಲೆಯ ಪಟಾಕಿ ದುರಂತದಲ್ಲಿ 14 ಜನರ ದುರ್ಮರಣ ಹೊಂದಿದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತರನ್ನು ಸಂಬಂಧಿಕರು ಆ್ಯಂಬುಲೆನ್ಸ್‌ಗೆ ಹಾಕಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ತಮ್ಮವರನ್ನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.