ಆನೇಕಲ್: ಅತ್ತಿಬೆಯ ಬಾಲಾಜಿ ಗೋಡೌನ್‌ನಲ್ಲಿ ಒಂದೇ ಗ್ರಾಮದ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿಯಿಂದ 10 ಮಂದಿ ಕಾರ್ಮಿಕರು ಇಲ್ಲಿಗೆ ಬಂದಿದ್ದರು.ಈ ಪೈಕಿ ಒಂದೇ ಗ್ರಾಮದ 8 ಮಂದಿ ಸಜೀವದಹನವಾಗಿದ್ದಾರೆ. ಈ ಹಿನ್ನೆಲೆಯಲ್ಲಿಅಮ್ಮಾಪಟ್ಟಿಯಲ್ಲಿ ಸೂತಕದ ಛಾಯೆ ಆವರಿಸಿದೆ.
ಇಂದು ಬೆಳ್ಳಂಬೆಳಗ್ಗೆಯೇ ಅತ್ತಿಬೆಲೆ ಗಡಿಯಲ್ಲಿ ಮೃತರ ಕುಟುಂಬಸ್ಥರು ಜಮಾಯಿಸಿದ್ದರು. ದುರಂತದ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಣೀರು ಸುರಿಸುತ್ತಾ ತಮ್ಮವರನ್ನ ಕಳೆದುಕೊಂಡ ನೋವನ್ನ ಸಂಬಂಧಿಕರು ಹೊರಹಾಕಿದರು.
ಮೃತರು ವಿದ್ಯಾರ್ಥಿಗಳು ಅಂತ ಹೇಳಲಾಗುತ್ತಿದ್ದು. 17 ವರ್ಷದ ಆದಿಕೇಶವನ್, 17ವರ್ಷದ ಗಿರಿ, 22 ವರ್ಷದ ವೇಡಪ್ಪನ್, 18 ವರ್ಷದ ವಿನೋದ್, 19 ವರ್ಷದ ಮುನಿವೇಲ್ ಎಂದು ಗುರ್ತಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿಗೆ ಕೆಲ್ಸಕ್ಕೆ ಬರ್ತಿದ್ದರು ಅನ್ನೋದು ತಿಳಿದುಬಂದಿದೆ.
ಮೃತರ ಸಂಖ್ಯೆ 14ಕ್ಕೆ ಏರಿಕೆ :
ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಶನಿವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡಿನ ಶಿವಕಾಶಿ ಮೂಲದವರು ಎಂದು ತಿಳಿದು ಬಂದಿದೆ.
ಇನ್ನು ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304 ಅಡಿ ಎಫ್ಐಆರ್ ದಾಖಲಾಗಿದೆ.