Sunday, November 17, 2024

5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಆನೆಕಲ್​ : ತಾಲೂಕು ಅತ್ತಿಬೆಲೆಯಲ್ಲಿನ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಅಗ್ನಿಶಾಮಕ ಡಿಜಿ ಕಮಲ್​​ ಪಂತ್ ಅವರು ಚರ್ಚಿಸಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆಯಲ್ಲಿನ ಪಟಾಕಿ ಗೋಡೌನ್​ ಅಗ್ನಿ ದುರಂತ ದುರದೃಷ್ಟಕರ. ಪ್ರಕರಣವನ್ನು ಸಿಐಡಿಗೆ ನೀಡಲಾಗುವುದು. ಮೃತರ ಕುಟಂಬಸ್ಥರಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಇದನ್ನೂ ಓದಿ: ಅತ್ತಿಬೆಲೆ ದುರಂತ: ಗೋದಾಮಿನ ಮಾಲೀಕರ ಮೇಲೆ ಕ್ರಮ- ಸಿಎಂ ಸಿದ್ದರಾಮಯ್ಯ

ಶನಿವಾರ ಮಧ್ಯಾಹ್ನ 3.15ರಿಂದ 3.30ರ ನಡುವೆ ಘಟನೆ ನಡೆದಿದೆ. ತಮಿಳುನಾಡಿನಿಂದ ಟ್ರಕ್​​ನಲ್ಲಿ ಪಟಾಕಿಯನ್ನು ತರಲಾಗಿದೆ. ಅಗ್ನಿ ದುರಂತಕ್ಕೆ ಕಾರಣ ಏನೂ ಅಂತ ತಿಳಿದುಬಂದಿಲ್ಲ. ವಿದ್ಯುತ್​ ತಂತಿ ಅಥವಾ ಯುಪಿಎಸ್​​ನಿಂದ ಘಟನೆ ನಡೆದಿರುವ ಮಾಹಿತಿ ದೊರೆತಿದೆ. ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಗೋಡೌನ್​ನಲ್ಲಿ ಸುರಕ್ಷತಾ ಕ್ರಮ ಇಲ್ಲದಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದರು. ಪಟಾಕಿ ಮಾರಾಟ ಮಾಡಲು ಹಾಗೂ ಸಂಗ್ರಹಿಸಲು ಎರಡಕ್ಕೂ ಲೈಸೆನ್ಸ್ ಇದೆಯಾ? ಎಂಬುವುದನ್ನು ಪರಿಶೀಲಿಸಬೇಕಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES