ಶಿವಮೊಗ್ಗ: ಸತ್ಯಶೋಧನಾ ಹೆಸರಲ್ಲಿ ರಾಜಕಾರಣಿಗಳು ಹೊರಗಿನಿಂದ ರಾಗಿಗುಡ್ಡಕ್ಕೆ ಬಂದು ವಾತಾವರಣವನ್ನು ಮಲಿನಗೊಳಿಸುವುದು ಬೇಡ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಪರೋಕ್ಷವಾಗಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಸ್ಥಳೀಯ ಎಲ್ಲಾ ಪಕ್ಷದ ನಾಯಕರು ಇಲ್ಲಿ ಸಂಯಮ ಕಾಪಾಡಿಕೊಂಡಿದ್ದಾರೆ. ಹಿಂದೂ-ಮುಸ್ಲಿಂ ಯಾರೂ ಕೂಡ ಘಟನೆಯನ್ನು ಬೆಂಬಲಿಸಿಲ್ಲ. ಆದರೆ, ಹೊರಗಿನಿಂದ ಇಲ್ಲಿಗೆ ಸಾಂತ್ವನ ಹೇಳಲು ಬಂದವರು ವಾತಾವರಣ ಪ್ರಕ್ಷುಬ್ಧಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಚಾಕುವಿನಿಂದ ಇರಿದು 13 ಕುರಿಗಳನ್ನು ಕೊಂದ ಕಿರಾತಕರು!
ಹೊರಗಿನಿಂದ ಬಂದ ಬಿಜೆಪಿ ನಾಯಕರು ಆಯುಧ ಪೂಜೆಗೆ ಶಸ್ತ್ರಗಳನ್ನು ಪೂಜೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ತಲ್ವಾರ್ ಪೂಜೆ ಮಾಡಿ ಎಂದು ಕರೆ ನೀಡಿದ್ದಾರೆ. ಇವು ಸಾಂತ್ವಾನದ ಮಾತುಗಳೇ ? ಹೀಗೆ ಮಾತನಾಡಿದವರು, ತಮ್ಮ ಮಕ್ಕಳ ಕೈಗೆ ಕತ್ತಿ ಕೊಡಲಿ. ಕಂಡವರ ಮಕ್ಕಳಿಗೆ ಕೊಡುವುದು ಬೇಡ. ರಾಜಕಾರಣಿಗಳು ತಮ್ಮ ಮಕ್ಕಳಿಗೆ ಎಂದೂ ಕತ್ತಿ ಕೊಡುವುದಿಲ್ಲ. ಪ್ರತಿಭಟನೆಗೆ ಕರೆ ತರುವುದಿಲ್ಲ. ಇದಕ್ಕೆ ಬಲಿಯಾಗುವವರು ಬಡವರ ಮಕ್ಕಳೇ. ಬಡವರ ಮಕ್ಕಳ ಕೈಯಲ್ಲಿ ಕತ್ತಿ ಹಿಡಿಸುತ್ತಾರೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.