Friday, December 27, 2024

ಬೀದರ್​ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ : 53 ಲಕ್ಷ ಮೌಲ್ಯದ ವಸ್ತು ವಶಕ್ಕೆ!

ಬೀದರ್ : ಜಿಲ್ಲೆಯಾದ್ಯಂತ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ 14 ಪ್ರಕರಣಗಳನ್ನು ಭೇದಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ನಡೆಸಿ ‌ಮಾಹಿತಿ‌ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟೆ,  ಒಟ್ಟು ಐದು ಪೊಲೀಸ್ ಠಾಣೆಯ 14 ಪ್ರಕರಣಗಳನ್ನ  ಪೊಲೀಸರು ಭೇದಿಸಿದ್ದಾರೆ.  ಜಿಲ್ಲೆಯ ಹುಮನಾಬಾದ್ ಪೊಲೀಸ ಠಾಣೆ, ಬೀದರ್ ಗಾಂಧಿಗಂಜ್ ಪೊಲೀಸ್ ಠಾಣೆ, ಔರಾದ್ ಪೊಲೀಸ್ ಠಾಣೆ, ಬಸವಕಲ್ಯಾಣ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯಾಚಣೆ‌ ಮಾಡಿದ ಪೊಲೀಸರು ಒಟ್ಟು 53 ಲಕ್ಷದ 37 ಸಾವಿರದ 700 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ!

ಇದರಲ್ಲಿ 50 ಬೈಕ್, 10 ತೊಲೆ ಬಂಗಾರ, 310ಗ್ರಾಮ ಬೆಳ್ಳಿ, 9 ಬಾವಿಗಳ ಮೋಟಾರ್ ಸೇರಿದೆ. ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಜನರು ಬಂಧನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವೇಳೆ ಅಪರಾಧ ಪ್ರಕರಣ ಭೇದಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತವರ ತಂಡಕ್ಕೆ ನಗದು ಬಹುಮಾನ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟೆ ಸನ್ಮಾನಿಧಿಸಿದರು.

RELATED ARTICLES

Related Articles

TRENDING ARTICLES