Monday, November 11, 2024

ನಕಲಿ ಚಿನ್ನ ನೀಡಿ 60 ಲಕ್ಷ ರೂ. ವಂಚನೆ!

ದಾವಣಗೆರೆ: 2.5 ಕೆ.ಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ₹60 ಲಕ್ಷ ನಗದು ಪಡೆದು ವಂಚಿಸಿರೋ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಗುತ್ತಿಗೆದಾರ ಗೋವರ್ಧನ್ ಎಂಬುವರಿಗೆ ಸಂದೀಪ್ ಹಾಗೂ ಈಶ್ವರಪ್ಪ ಎಂಬ ಇಬ್ಬರು ವಂಚಕರು ಯಾಮಾರಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಚನ್ನಗಿರಿಯಲ್ಲಿ ವಿವಿಧ‌ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಗೋವರ್ಧನ್‌ನ ಪರಿಚಯ ಮಾಲಡಿಕೊಂಡ ಸಂದೀಪ್ ಹಾಗೂ ಈಶ್ವರಪ್ಪ, ಆಗಾಗ ಕರೆ ಮಾಡಿ ವಿಶ್ವಾಸ ಗಿಟ್ಟಿಸಿಕೊಂಡಿದ್ದರು. ಬಳಿಕ ಒಂದು ದಿನ ನಮ್ಮ ಮನೆಯ ಪಾಯಾ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ನಂಬಿಸಿ, ನಕಲಿ ಚಿನ್ನ ನೀಡಿ ಬರೊಬ್ಬರಿ 60 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ತಮ್ಮ ಮಕ್ಕಳ ಕೈಗೆ ಆಯುಧ ಕೊಡಲಿ ಬಡವರ ಮಕ್ಕಳಿಗಲ್ಲ: ಆಯನೂರು ಮಂಜುನಾಥ್​!

ಬಳಿಕ ಗೋವರ್ಧನ್ ಚಿನ್ನದ ಅಂಗಡಿಯಲ್ಲಿ ನಾಣ್ಯಗಳನ್ನ ಪರಿಶೀಲಿಸಿದಾಗ ವಂಚನೆಗೊಳಗಾಗಿರೋದು ತಿಳಿದುಬಂದಿದೆ. ಕೂಡಲೇ ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ವಂಚಕರನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಂದ ಪೊಲೀಸರು 40 ಲಕ್ಷ ರೂಪಾಯಿ ವಶಪಡಿಸಿಕೊಂಡು, ಜೈಲಿಗಟ್ಟಿದ್ದಾರೆ.

RELATED ARTICLES

Related Articles

TRENDING ARTICLES