Monday, December 23, 2024

ಮಕ್ಕಳ ಆಹಾರ ಕಿಟ್​ ಮಾರಾಟ: ಸಿಬ್ಬಂದಿ ಅಮಾನತು!

ಬಾಗಲಕೋಟೆ : ನವನಗರದ 43ನೇ ಸೆಕ್ಟರ್​ನಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶಾಲಾ ಮಕ್ಕಳ ಆಹಾರ ಕಿಟ್​​​​​​​​ ಬೇರೆಡೆಗೆ ಸಾಗಿಸ್ತಿದ್ದ ಅಡುಗೆ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಶಾಲಾ ಮಕ್ಕಳ ಆಹಾರ ಕಿಟ್ ಕದ್ದು ಮಾರುತಿದ್ದ ಡಿ ದರ್ಜೆ ನೌಕರರಾದ ಸವಿತಾ ಸಂಕ್ಯಾನವರ್​​​ ಅಮಾನತಿಗೆ CEO ಆದೇಶ ಹೊರಡಿಸಿದ್ದಾರೆ. ಆರೋಪ ಕೇಳಿಬಂದ ಬೆನ್ನಲ್ಲೇ ಜಿಲ್ಲಾ ಪಂಚಾಯತ್ CEO ಶಶಿಧರ್ ಕುರೇರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಈ ವೇಳೆ ಶಾಲಾ ಮುಖ್ಯ ಶಿಕ್ಷಕ ರಿಯಾಜ್ ಮಕಾಂದಾರ ವಿರುದ್ಧ ಜಿಲ್ಲಾ ಪಂಚಾಯತಿ CEO ಶಶಿಧರ್​ ಗರಂ ಆಗಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಹೊಸ ಸುಂಕ ಪದ್ಧತಿ..!

ಬಳಿಕ ಶಾಲಾ ಅವ್ಯವಸ್ಥೆ ಕಂಡು ಮುಖ್ಯೋಪಾಧ್ಯಾಯರ ವಿರುದ್ಧ ಇಲಾಖಾ ವಿಚಾರಣೆಗೆ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ CEO ಆದೇಶ ಹೊರಡಿಸಿದ್ರು.

RELATED ARTICLES

Related Articles

TRENDING ARTICLES