ಬೆಂಗಳೂರು : ನಮ್ಮ ಮೆಟ್ರೋದ ನೇರಳೆ ಬಣ್ಣದ ಬಹು ನಿರೀಕ್ಷಿತ ಕೆ.ಆರ್.ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು, ಇಂದಿನಿಂದ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಈ ಎರಡು ಮೆಟ್ರೋ ಮಾರ್ಗಗಳ ಉದ್ಘಾಟನೆಯೊಂದಿಗೆ ನೇರಳೆ ಮಾರ್ಗವು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಬೆಂಗಳೂರು ಪೂರ್ವದ ಜನದಟ್ಟಣೆ ಕಡಿಮೆ ಆಗುವ ನಿರೀಕ್ಷೆಯಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಈಗಾಗಲೇ ಎರಡೂ ಮಾರ್ಗಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಜೊತೆಗೆ ಮನಸ್ತಾಪ: ಮೌನ ಮುರಿದ ದ್ರುವ ಸರ್ಜಾ!
ಈಗಾಗಲೇ ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿ ಸುರಕ್ಷತೆಯ ಅನುಮೋದನೆಯನ್ನು ಸ್ವೀಕರಿಸಿದ್ದಾರೆ. ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಇಂದು CMRS ಅನುಮೋದನೆ ದೊರೆಯುವ ಸಾಧ್ಯತೆ ಇದ್ದು ಇಂದು ಉದ್ಘಾಟನೆಗೆ BMRCL ಪ್ಲ್ಯಾನ್ ಮಾಡಿದೆ.