Sunday, December 22, 2024

ಅಧಿಕಾರ ಇದ್ದಾಗ ಎಸಿ ರೂಂನಲ್ಲಿದ್ದಂಗೆ ಇರುತ್ತೆ : ಸೋಮಶೇಖರ್​ಗೆ ಸಿ.ಟಿ. ರವಿ ಟಾಂಗ್

ದಾವಣಗೆರೆ : ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತವರಣ ಇದೆ ಎಂದಿರುವ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮಾಜಿ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ಎಸಿ ರೂಂ ನಲ್ಲಿದ್ದಂಗೆ ಇರುತ್ತೆ. ಅಧಿಕಾರ ಇಲ್ಲದಾಗ ಕೆಲವರಿಗೆ ಉಸಿರುಕಟ್ಟಿಸುವ ವಾತವರಣ ಇರುತ್ತೆ ಎಂದು ಕುಟುಕಿದ್ದಾರೆ.

ನಾವು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ಮಾಡುತ್ತಿರುವವರು. ಅಧಿಕಾರ ಇಲ್ಲದಾಗ ಕೆಲವರು ವಿಲವಿಲ ಒದ್ದಾಡುತ್ತಾರೆ. ಉಸಿರುಕಟ್ಟಿಸುವ ವಾತವರಣ ಇರುತ್ತೆ. ನಾವು ಅಧಿಕಾರ ಇದ್ದಾಗಲೂ, ಇಲ್ಲದಾಗಲು ವಿಚಾರ ಬಿಟ್ಟು ರಾಜಕಾರಣ ಮಾಡುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ನಾವು ವೈಯಕ್ತಿಕ ಅಜೆಂಡ್ ಜೊತೆ ಇಲ್ಲ

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿ, ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ. ಕೆಲವರು ಪರ್ಸನಲ್ ಅಜೆಂಡ್ ದಿಂದ ವಿರೋಧ ಮಾಡುತ್ತಿದ್ದಾರೆ. ನಾವು ವೈಯಕ್ತಿಕ ಅಜೆಂಡ್ ಜೊತೆ ಇಲ್ಲ, ಪಾರ್ಟಿ ಅಜೆಂಡ್ ಜೊತೆ ಇದ್ದೆವು. ನಾವು ವೈಯಕ್ತಿಕ ಲಾಭ ನಷ್ಟದ ಜೊತೆ ರಾಜಕೀಯ ಮಾಡಿಕೊಂಡು ಬಂದಿಲ್ಲ. ಕೇವಲ ಪಾರ್ಟಿ ಏನೋ ಹೇಳುತ್ತೋ ಅದನ್ನು ಕೇಳುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಹೇಳುವ ವಿಚಾರ ಅಲ್ಲ ಎಂದು ಸಿ.ಟಿ ರವಿ ಜಾಣ್ಮೆಯ ಉತ್ತರ ನೀಡಿದ್ದಾರೆ.

RELATED ARTICLES

Related Articles

TRENDING ARTICLES