Monday, December 23, 2024

ನಟ ದರ್ಶನ್ ಜೊತೆಗೆ ಮನಸ್ತಾಪ: ಮೌನ ಮುರಿದ ಧ್ರುವ ಸರ್ಜಾ!

ಬೆಂಗಳೂರು : ನಟ ದರ್ಶನ್​ ಜೊತೆಗೆ ಮನಸ್ತಾಪ ಒಪ್ಪಿಕೊಂಡ ನಟ ದ್ರುವ ಸರ್ಜಾ ತಮ್ಮ ಅಸಮಧಾನವನ್ನು ಮಾದ್ಯಗಳ ಮುಂದೆ ಹೊರಹಾಕಿದರು.

ಕಾವೇರಿ ಹೋರಾಟದ ಹಿನ್ನೆಲೆ ಕರ್ನಾಟಕ ಬಂದ್​ ನಲ್ಲಿ ಭಾಗಿಯಾಗಿದ್ದಾಗ ದರ್ಶನ್​ ಜೊತೆಗೆ ಮಾತನಾಡದೆ ಇದ್ದದ್ದರ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮನಸ್ತಾಪ ಏನೇ ಇರಲಿ ದರ್ಶನ್​ ಸರ್​ ನಮ್ಮ ಸೀನಿಯರ್​ ಆವರಿಗೆ ನಾನು ಅವರ ಮುಂದೆ ಅಲ್ಲದೇ ಅವರ ಪ್ರೆಸೆನ್ಸ್​ ಇಲ್ಲದಿದ್ದಾಗಲು ಅವರಿಗೆ ರೆಸ್ಪೆಕ್ಟ್​ ಕೊಟ್ಟೇ ಕೊಡ್ತೀನಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ 6G ಪ್ರಯೋಗಾಲಯ ಸ್ಥಾಪಿಸಿದ Nokia!

ಮನಸ್ಸಿನ ಒಳಗೊಂದು ಹೊರಗೊಂದು ಇರೋದಕ್ಕೆ ನನಗೆ ಆಗಲ್ಲ, ದರ್ಶನ್​ ಅವರಿಗೆ ನನ್ನ ಬಳಿ ಎರಡು ಪ್ರಶ್ನೆಗಳಿವೆ ಆ ಪ್ರಶ್ನೆಗಳನ್ನು ಪರ್ಸನಲ್​ ಆಗಿ ನಾನು  ಅವರ ಬಳಿ ಕೇಳಿ ಕ್ಲಾರಿಟಿ ತಗೋತೀನಿ ಎಂದರು.

ಫೇಕ್​ ಅಕೌಂಟ್​ :

ಇನ್ನು ಮೊನ್ನೆ ನಡೆದ ಕಾವೇರಿ ಹೋರಾಟದ ವಿಚಾರವಾಗಿ ಕೆಲವರು ತಮ್ಮ ಹೆಸರಲ್ಲಿ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿ ನಮ್ಮ ನಮ್ಮ ನಡುವೆಯೇ ತಂದಿಡ್ತಾ ಇದಾರೆ. ಅವರಿಗೆ ನಾನು ಹೇಳೋದು ಒಂದೇ. ಆ ತರಹದ ಕೆಲಸ ಮಾಡಬೇಡಿ ಒಂದು ವೇಳೆ ಮಾಡೇ ಮಾಡ್ತೀನಿ ಅಂದ್ರೆ ಮಾಡಿ, ಆದರೇ ದಯವಿಟ್ಟು ನಮ್ಮ ಕೈಗೆ ತಗಲಾಕಿಕೊಳ್ಳಬೇಡಿ ಎಂದು ಅವರು ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶ ನೀಡಿದರು.

RELATED ARTICLES

Related Articles

TRENDING ARTICLES