Sunday, December 22, 2024

ಹೊಸ ಮಾರ್ಗಗಳಿಗೆ ಬಿಎಂಟಿಸಿ ಬಸ್ ಸೇವೆ!

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಹಲವೆಡೆ ಹೊಸಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ ಸಂಚಾರ ಆರಂಭವಾಗಿದೆ.

ಬೆಂಗಳೂರಿನಾದ್ಯಂತ ಜನಸಂಖ್ಯೆ ಹೆಚ್ಚಾಗುತ್ತಿದ್ದು ಕೆಲಸ ಕಾರ್ಯಗಳಿಗೆ ನಿತ್ಯ ಒಂದಿಲ್ಲೊಂದು ಕಡೆ ಸಂಚಾರಿಸಲು ಬಿಎಂಟಿಸಿ ಅನಿವಾರ್ಯವಾಗಿದೆ. ಪ್ರಯಾಣಿಕರು ಹಾಗು ಸಾರ್ವಜನಿಕರಿಂದ ನಗರದ ಕೆಲವು ಮಾರ್ಗಗಳಲ್ಲಿ ಬಿಎಂಟಿಸಿ ಬಸ್​ ವ್ಯವಸ್ಥೆ ಕಲ್ಪಿಸಲು ಮನವಿಗಳು ಬಂದ ಹಿನ್ನೆಲೆ ಬಿಎಂಟಿಸಿ ವತಿಯಿಂದ ನೂತವಾಗಿ ಕೆಲವು ಮಾರ್ಗಗಳಿಗೆ ಬಿಎಂಟಿಸಿ ಬಸ್​​ ವ್ಯವಸ್ಥೆ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಟ್ರೈನ್​ನಲ್ಲಿ ಗೋಬಿ ಸೇವಿಸಿದ ಪ್ರಯಾಣಿಕ: 500 ರೂ.ದಂಡ ವಸೂಲಿ!

8ನೇ ಮೈಲಿಯಿಂದ ಗಂಗೊಂಡನಹಳ್ಳಿ ಮೂಲಕ ಕಾಚೋಹಳ್ಳಿ ಗೇಟ್ ವರೆಗೆ 3 ಬಸ್‌ಗಳು ನಿತ್ಯ 27 ಟ್ರಿಪ್ ಸಂಚರಿಸಲಿವೆ. ಜಾಲಹಳ್ಳಿ ಕ್ರಾಸ್‌ನಿಂದ ಚಿಕ್ಕಬಾಣಾವರ, ಅಬ್ಬಿಗೆರೆ ಕ್ರಾಸ್, ಗಂಗಮ್ಮ ಸರ್ಕಲ್‌ ಮೂಲಕ BEL ಸರ್ಕಲ್‌ವರೆಗೆ 4 ಬಸ್‌ಗಳು ನಿತ್ಯ 31 ಟ್ರಿಪ್ ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES