ಬೆಂಗಳೂರು : ವಿಶ್ವಕಪ್ ಕ್ರಿಕೆಟ್ ಗೆ ಉಗ್ರರಿಂದ ಬೆದರಿಕೆ ಬಂದಿದ್ದು ಪಂದ್ಯಗಳು ನಡೆಯಲಿರುವ ದೇಶದ ಎಲ್ಲಾ ಕ್ರೀಡಾಂಗಣಗಳಿಗೂ ಬಿಗಿ ಭದ್ರತೆ ಒದಗಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ.
2023ರ ವಿಶ್ವಕಪ್ ಮೇಲೆ ಖಲಿಸ್ತಾನದ ಉಗ್ರರ ಕೆಂಗಣ್ಣು ಬಿದ್ದಿದ್ದು ಪಂದ್ಯ ನಡೆಯುವ ಎಲ್ಲಾ ಕ್ರೀಡಾಂಗಳಿಗೂ ಸೂಕ್ತ ಭದ್ರತೆಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕು ಭಿಗಿ ಭದ್ರತೆ ಒದಗಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ವಾಟಾಳ್ ನೇತೃತ್ವದಲ್ಲಿ ಇಂದು KRS ಚಲೋ ಬೃಹತ್ ರ‍್ಯಾಲಿ!
ಇಂದಿನಿಂದ ವಿಶ್ವಕಪ್ ಕ್ರಿಕೆಟ್ ಸಮರ ಆರಂಭವಾಗಿದ್ದು ನವೆಂಬರ್ 19 ರ ವರೆಗೆ ದೇಶದ ವಿವಿಧ ರಾಜ್ಯಗಳಲ್ಲಿನ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಒಟ್ಟು 10 ದೇಶದ ತಂಡಗಳು ವಿಶ್ವಕಪ್ ನಲ್ಲಿ ಭಾಗಿಯಾಗಲಿದ್ದು 48 ಪಂದ್ಯಗಳು ನಡೆಲಿದೆ. ಇಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಗಾಟನಾ ಪಂದ್ಯವು ಅಹಮ್ಮದಾಬಾದ್ ನ ನರೇಂದ್ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.