ಹಾಸನ : ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯೇ ಕ್ಯಾಂಡಿಡೇಟ್ ಆಗ್ತಾರೆ. ಜೆಡಿಎಸ್ ಅಲೆಯನ್ಸ್ (ಮೈತ್ರಿ) ಆಗಿರೋದ್ರಿಂದ ಬಿಜೆಪಿಗೆ ಸಹಾಯ ಮಾಡೋ ಅನಿವಾರ್ಯತೆ ಇರುತ್ತೆ. ಅವರು ಹೇಳಿದ್ದಾರೆ ಲಾಂಗ್ ಟರ್ಮ್ ರಿಲೆಶನ್ ಅಂತ ಎಂದು ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರೀತಂಗೌಡ ಸಿಟ್ಟಿಂಗ್ ಎಂಎಲ್ಎ ಇದ್ದ ಈಗ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಿಟ್ಟಿಂಗ್ ಆಗಿರೋದು ಸಿಟ್ಟಿಂಗ್ ಹಾಗೆಯೇ ಇರಬೇಕು ಅಂತೇನಿಲ್ಲ. ಸ್ಟ್ಯಾಂಡಿಂಗೂ ಆಗಬಹುದು, ಬೇರೆಯವರು ಸಿಟ್ಟಿಂಗ್ ಆಗಬಹುದು. ಕಾದುನೋಡೋಣ, ಸೀಟ್ ಹಂಚಿಕೆಯಲ್ಲಿ ಯಾವುದೂ ತೀರ್ಮಾನ ಆಗಿಲ್ಲ ಎಂದರು.
ಜೆಡಿಎಸ್ ನಾಯಕರುಗಳೂ ಹೇಳಿದ್ದಾರೆ, ಸೀಟ್ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಅಂತ. ಗೆಲುವು ಒಂದೇ ಮಾನದಂಡ. ಆರ್ಪಿಐ ಗೆಲ್ಲುತ್ತೆ ಅಂದ್ರೆ ಆರ್ಪಿಐಗೆ ಕೊಡ್ತೇವೆ. ಜೆಡಿಎಸ್ ಗೆಲ್ಲುತ್ತೆ ಅಂದ್ರೆ ಜೆಡಿಎಸ್ಗೆ ಕೊಡ್ತೇವೆ, ಬಿಜೆಪಿ ಗೆಲ್ಲುತ್ತೆ ಅಂದ್ರೆ ಬಿಜೆಪಿಗೆ ಕೊಡ್ತೇವೆ. ಜೆಡಿಎಸ್ನ ಮೂಲ ಮಂತ್ರ ಇರೋದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಮಾಡೋದು ಎಂದು ಹೇಳಿದರು.
4,000 ವೋಟು ಇರೋ ಪಕ್ಷಕ್ಕೆ ಹೋಗ್ತೀನಾ?
ಕಾಂಗ್ರೆಸ್ ನಾಯಕರು ಪ್ರೀತಂಗೌಡಗೆ ಗಾಳ ಹಾಕಿರುವ ವಿಚಾರ ಕುರಿತು ಹಾಸನದಲ್ಲಿ ಮಾತನಾಡಿದ ಅವರು, ಪ್ರೀತಂಗೌಡ ರಾಜಕಾರಣಕ್ಕೆ ಬಂದಿರೋದು ತತ್ವ ಸಿದ್ದಾಂತದ ಆಧಾರದ ಮೇಲೆ. ಚುನಾವಣೆ ಮಾಡಬೇಕು ಅಂತ ಬಂದಾಗ ಹಾಸನದಲ್ಲಿ ಬಿಜೆಪಿ 6,100 ವೋಟು ಇತ್ತು. ಇದೀಗ, 78,000ಕ್ಕೆ ಹೋಗಿದೆ. ಕಾರ್ಯಕರ್ತರ ತಂಡ ಇದೆ, ಇದನ್ನ ಬಿಟ್ಟು 4,000 ವೋಟು ಇರೋ ಪಕ್ಷಕ್ಕೆ ಯಾರಾದ್ರೂ ಹೋಗ್ತಾರಾ? ಬೇರೆ ಮನೆ ಹೊಸದಾಗಿ ಕಟ್ಟೋ ಅವಶ್ಯಕತೆ ಏನಿದೆ? ಎಂದರು.