ಮುಂಬೈ : ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಟ್ರೇಡರ್ಸ್ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.
ಬಚ್ಚನ್ ಕೆಲಸ ಮಾಡಿರುವ ಫ್ಲಿಪ್‌ಕಾರ್ಟ್‌ನ ಮುಂಬರುವ ಬಿಗ್ ಬಿಲಿಯನ್ ಡೇ ಮಾರಾಟದ ಕುರಿತು ಬಿಡುಗಡೆಯಾದ ಜಾಹೀರಾತನ್ನು ತಪ್ಪುದಾರಿಗೆಳೆಯುವಂತಿದೆ ಎಂದು CAT ಬಣ್ಣಿಸಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೀಡಿರುವ ದೂರಿನಲ್ಲಿ ಸಿಎಟಿ ಜಾಹೀರಾತು ದೇಶದ ಸಣ್ಣ ವ್ಯಾಪಾರಿಗಳ ವಿರುದ್ಧದ ಜಾಹೀರಾತು ಎಂದು ಬಣ್ಣಿಸಿದ್ದು, ಜಾಹೀರಾತನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಇದನ್ನೂ ಓದಿ: ತಲೈವರ್ 170 ಫಸ್ಟ್ ಲುಕ್ ಬಿಡುಗಡೆ : ರಜನಿ ಜೊತೆ ಬಿಗ್ಬಿ, ಫಹದ್, ರಾಣಾ?
ಗ್ರಾಹಕ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತಿಗಾಗಿ ಫ್ಲಿಪ್‌ಕಾರ್ಟ್‌ಗೆ ದಂಡ ಮತ್ತು ಬಚ್ಚನ್‌ಗೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕೆಂದು ಸಂಸ್ಥೆ ಒತ್ತಾಯಿಸಿದೆ.