Monday, December 23, 2024

ತಲೈವರ್ 170 ಫಸ್ಟ್ ಲುಕ್ ಬಿಡುಗಡೆ : ರಜನಿ ಜೊತೆ ಬಿಗ್​ಬಿ, ಫಹದ್, ರಾಣಾ?

ಬೆಂಗಳೂರು : ನಟ ರಜನಿಕಾಂತ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಬಿಡುಗಡೆ ಆದ ಅವರ ‘ಜೈಲರ್’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಅಭಿಮಾನಿಗಳು ಆ ಚಿತ್ರವನ್ನು ಸಖತ್​ ಇಷ್ಟಪಟ್ಟರು.

ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ‘ಜೈಲರ್​’ ಅಬ್ಬರಿಸಿತು. ಅದರ ಬೆನ್ನಲ್ಲೇ ರಜನಿಕಾಂತ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಹೊಸ ಹೊಸ ಅಪ್​ಡೇಟ್​ ಸಿಗುತ್ತಿದೆ. ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್​ 170’ ಎಂದು ಕರೆಯಲಾಗುತ್ತಿದೆ. ರಜನಿಕಾಂತ್ ಜೊತೆ ಬಾಲಿವುಡ್​ ಶೆಹೆನ್​​ಷಾ ಬಿಗ್ ಬಿ ಅಮಿತಾಬ್ ಬಚ್ಚನ್, ಮಲಯಾಳಂ ಸೂಪರ್ ಸ್ಟಾರ್ ಫಹದ್ ಫಾಸಿಲ್, ಬಾಹುಬಲಿ ಫೇಮ್ ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಷಾರಾ ವಿಜಯನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಅಮಿತಾಬ್ ಬರೋಬ್ಬರಿ 32 ವರ್ಷಗಳ ನಂತರ ದಕ್ಷಿಣದ ಚಿತ್ರವೊಂದರಲ್ಲಿ ತಲೈವಾ ರಜನಿ ಜೊತೆ ಮೊದಲ ಬಾರಿಗೆ ಜೋಡಿಯಾಗುತ್ತಿದ್ದಾರೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಮೂಲಕ ‘ತಲೈವರ್​ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್​’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES