Wednesday, January 22, 2025

ಸನಾತನ ಅನ್ನೋದೇ ಏಕೈಕ ಧರ್ಮ : ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ: ಸನಾತನ ಧರ್ಮದ ಮಹತ್ವವನ್ನು ಒತ್ತಿಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾರ್ಯಕ್ರಮವೊಂದರಲ್ಲಿ ಜಗತ್ತಿನಲ್ಲಿ ಸನಾತನ ಧರ್ಮ ಅನ್ನೋದೇ ಏಕೈಕ ಧರ್ಮವಾಗಿದೆ. ಉಳಿದವೆಲ್ಲವೂ ಪಂಥಗಳು ಅಥವಾ ಪೂಜಾ ವಿಧಾನಗಳಾಗಿವೆ ಎಂದು ಹೇಳಿದ್ದಾರೆ.

ಸನಾತನ ಧರ್ಮದ ಮೇಲಿನ ಯಾವುದೇ ದಾಳಿಯು ಇಡೀ ಮಾನವಕುಲವನ್ನು ಅಪಾಯಕ್ಕೆ ತಳ್ಳಬಹುದು ಎಂದು ತಿಳಿಸಿದ್ದಾರೆ. ಸನಾತನ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡಬೇಕು ಎಂದು DMK ನಾಯಕ ಹಾಗೂ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಅವರ ಹೇಳಿಕೆಯ ಬೆನ್ನಲ್ಲಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಮಾತು ಹೇಳಿದ್ದಾರೆ.

ಇದನ್ನೂ ಓದಿ : ಶೌಚಾಲಯ ಸ್ವಚ್ಛ ಮಾಡಿದ ಡೀನ್ ಮತ್ತು ಸಂಸದ

ಸನಾತನ ಧರ್ಮ ಅನ್ನೋದು ಏಕೈಕ ಧರ್ಮ, ಉಳಿದವು ಎಲ್ಲಾ ಪಂಥಗಳು ಮತ್ತು ಪೂಜಾ ವಿಧಾನಗಳು. ಸನಾತನವು ಮಾನವೀಯತೆಯ ಧರ್ಮವಾಗಿದೆ ಮತ್ತು ಅದರ ಮೇಲಿನ ಯಾವುದೇ ದಾಳಿಯು ಇಡೀ ಮಾನವೀಯತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಆದಿತ್ಯನಾಥ್ ಅವರು ಗೋರಖ್‌ಪುರದ ಗೋರಖನಾಥ ದೇವಾಲಯದಲ್ಲಿ ನಡೆದ ‘ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ’ದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

RELATED ARTICLES

Related Articles

TRENDING ARTICLES