Sunday, January 19, 2025

ಏಷ್ಯನ್ ಗೇಮ್ಸ್ : ನೀರಜ್ ಜೋಪ್ರಾಗೆ ಚಿನ್ನದ ಪದಕ

ಬೆಂಗಳೂರು : ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌, ಭಾರತದ ನೀರಜ್‌ ಚೋಪ್ರಾ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ. ನೀರಜ್​ ಜೋಪ್ರಾ ಅವರು ಜಾವೆಲಿನ್​ ಅನ್ನು 88.88 ಮೀಟರ್​ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಕುಮಾರ್​ ಜೆನಾ 87.54 ಮೀಟ್ ದೂಐರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಜಕಾರ್ತಾದಲ್ಲಿ ನಡೆದ ಏಷ್ಯನ್​ ಗೇಮ್ಸ್​ 2018ರಲ್ಲಿ ನೀರಜ್ ಜೋಪ್ರಾ 88.06 ಮೀಟ್​ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.

ನೀರಜ್‌ ಚೋಪ್ರಾ ಪುರುಷರ ಜಾವೆಲಿನ್‌ ಎಸೆತದಲ್ಲಿ ಕಣಕ್ಕಿಳಿದಿದ್ದರು. ಇಂದು ಚಿನ್ನ ಗೆಲ್ಲುವ ಮೂಲಕ ಈ ಬಾರಿ ಚಾಂಪಿಯನ್‌ ಪಟ್ಟ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ತಮ್ಮ ಪ್ರಮುಖ ಎದುರಾಳಿ, ಪಾಕಿಸ್ತಾನದ ನದೀಂ ಗಾಯಗೊಂಡು ಕೂಟದಿಂದ ಹೊರಬಿದ್ದಿರುವ ಕಾರಣ ನೀರಜ್‌ ಬಂಗಾರ ಗೆಲ್ಲುವ ಹಾದಿ ಸುಗಮಗೊಂಡಿತ್ತು.

RELATED ARTICLES

Related Articles

TRENDING ARTICLES