Sunday, December 22, 2024

ಕಾವೇರಿಗಾಗಿ ಅ.10ಕ್ಕೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌: ವಾಟಾಳ್ ನಾಗರಾಜ್​

ಬೆಂಗಳೂರು : ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರ ವಿರುದ್ಧ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್‌ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅತ್ತಿಬೆಲೆ ಬಳಿ ಹೆದ್ದಾರಿ ಬಂದ್ ಮಾಡಲಿದ್ದೇವೆ ಎಂದು ವಿಧಾನಸೌಧದಲ್ಲಿ ತಿಳಿಸಿದ್ದಾರೆ. ತಮಿಳುನಾಡಿನವರು ನಮ್ಮ ಮೇಲೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತದೆ. KRSನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು ಇಷ್ಟು ಬಂತು ಅಂತ ಅದೇನೋ ಹೇಳ್ತಾರೆ ಪಾಪ. ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡುತ್ತಾರೆ.

ಇದನ್ನೂ ಓದಿ: ಸನಾತನ ಅನ್ನೋದೇ ಏಕೈಕ ಧರ್ಮ : ಯೋಗಿ ಆದಿತ್ಯನಾಥ್​

ತಮಿಳುನಾಡಿನವರು ಮಾರುವೇಶದಲ್ಲಿ ಬಂದು KRS ರೌಂಡ್ ಹಾಕಿಕೊಂಡು ಹೋಗಲಿ. ಸ್ಟಾಲಿನ್ ಏನ್ ಬರೋದು ಬೇಡ. ನಮ್ಮನ್ನ ಏನು ಮಾಡಬೇಕು ಅನ್ಕೊಂಡಿದ್ದಾರೆ. ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಅರ್ಜಿ ಏನಾಯ್ತು, ಅಲ್ಲಿಯವರೆಗೆ ನೀರು ಏನಾಗ್ತಿದೆ ಎನ್ನುವ ಸತ್ಯ ನಮಗೆ ಬೇಕಿದೆ ಎಂದು ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

RELATED ARTICLES

Related Articles

TRENDING ARTICLES