Wednesday, January 22, 2025

ನಟಿ ಗಾಯತ್ರಿ ಜೋಶಿ ಕಾರು ಅಪಘಾತ, ದಂಪತಿ ಸಾವು

ಬೆಂಗಳೂರು : ಶಾರೂಖ್‌ ಖಾನ್‌ ಅಭಿನಯದ ಸ್ವದೇಶ್‌ ಚಿತ್ರದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟ ಬಾಲಿವುಡ್‌ ನಟಿ ಗಾಯತ್ರಿ ಜೋಶಿ ಅವರ ಕಾರು ಇಟಲಿಯಲ್ಲಿ ಅಪಘಾತವಾಗಿದೆ.

ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಪ್ರಯಾಣಿಸುತ್ತಿದ್ದ ಕಾರು ಇಟಲಿಯಲ್ಲಿ ಅಪಘಾತವಾಗಿದೆ. ವರದಿಗಳ ಪ್ರಕಾರ ಈ ರಸ್ತೆ ಅಪಘಾತದಲ್ಲಿ ವೃದ್ದ ದಂಪತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯನ್ನು ಸ್ವತಃ ನಟಿಯೇ ಹಂಚಿಕೊಂಡಿದ್ದಾರೆ.

ನಾನು ಮತ್ತು ನನ್ನ ಪತಿ ವಿಕಾಸ್ ಇದೀಗ ಇಟಲಿಯಲ್ಲಿ ಇದ್ದೇವೆ. ನಾನು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಇದೊಂದು ಸರಣಿಯ ಅಪಘಾತವಾಗಿದ್ದು, ನಾವು ಸುರಕ್ಷಿತರಾಗಿದ್ದೇವೆ ಎಂದು ಗಾಯತ್ರಿ ಅವರು ಹೇಳಿದ್ದಾರೆ. ಈ ಸರಣಿಯ ಅಪಘಾತದಲ್ಲಿ ಫೆರಾರಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸ್ವಿಸ್ ದಂಪತಿ ಮೃತಪಟ್ಟಿದ್ದಾರೆ.

ಘಟನೆ ನಡೆದದ್ದು ಹೇಗೆ?

ಗಾಯತ್ರಿ ಜೋಶಿ ಹಾಗೂ ಪತಿ ವಿಕಾಸ್ ಜೊತೆ ಲಂಬೋರ್ಗಿನಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕಾರು ಫೆರಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಫೆರಾರಿಗೆ ಬೆಂಕಿ ಹೊತ್ತಿಕೊಂಡಿತು ಹಾಗೂ ಸ್ವಿಟ್ಜರ್ಲೆಂಡ್​ ಮೂಲದ ದಂಪತಿಗಳು ಸಾವನ್ನಪ್ಪಿದ್ದಾರೆ. ಆದರೆ, ಅಪಘಾತದಲ್ಲಿ ಗಾಯತ್ರಿ ಹಾಗೂ ಆಕೆಯ ಪತಿಗೆ ಯಾವುದೇ ಗಾಯಗಳಾಗಿಲ್ಲ.

RELATED ARTICLES

Related Articles

TRENDING ARTICLES