Wednesday, January 22, 2025

ಶ್ರೀದೇವಿಯದ್ದು ಸಹಜ ಸಾವಲ್ಲ: ಸಾವಿನ ರಹಸ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್​!

ಮುಂಬೈ : ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್​ ಹೋಟೆಲ್​ನ ಬಾತ್​ಟಬ್​ನಲ್ಲಿ ಮುಳುಗಿ ಅವರು ಕೊನೆಯುಸಿರು ಎಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತಗೊಳಗಾಗಿತ್ತು.

ಆ ಘಟನೆ ನಡೆದು ಇಷ್ಟು ವರ್ಷಗಳು ಕಳೆದ ಬಳಿಕ ಮೊದಲ ಬಾರಿಗೆ ಶ್ರೀದೇವಿ ಪತಿ ಬೋನಿ ಕಪೂರ್​ ಅವರು ಮೌನ ಮುರಿದಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಅವರು ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಾವು ಸುದೀರ್ಘವಾದ ವಿಚಾರಣೆಗೆ ಒಳಪಟ್ಟಿರುವುದಾಗಿ ಬೋನಿ ಕಪೂರ್​ ತಿಳಿಸಿದ್ದಾರೆ. ಅಲ್ಲದೇ ಶ್ರೀದೇವಿಯ ಸಾವಿಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಮಚ್ಚು, ಲಾಂಗು, ಕಲ್ಲಿನಿಂದ ದಾಳಿ ಮಾಡಿದ್ದಾರೆ : ಮಹಿಳೆಯರ ಆಕ್ರೋಶ

ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಶ್ರೀದೇವಿ ಪಾಲಿಸುತ್ತಿದ್ದ ಡಯೆಟ್​ನಿಂದಾಗಿ ಈ ಸಾವು ಸಂಭವಿಸಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. ಶ್ರೀದೇವಿ ಯಾವಾಗಲೂ ಉಪವಾಸ ಮಾಡುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಬೇಕು, ದೇಹದ ಶೇಪ್​ ಚೆನ್ನಾಗಿ ಇರಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಡಯೆಟ್​ ಮಾಡುತ್ತಿದ್ದರು.

ನನ್ನನ್ನು ಮದುವೆ ಆದಾಗಿನಿಂದ ಹಲವು ಬಾರಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಲೋ ಬಿಪಿ ಇದೆ ಅಂತ ವೈದ್ಯರು ಹೇಳುತ್ತಲೇ ಇದ್ದರು ಎಂದಿದ್ದಾರೆ ಬೋನಿ ಕಪೂರ್​.

RELATED ARTICLES

Related Articles

TRENDING ARTICLES