Friday, December 27, 2024

ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿ!

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಶುಕ್ರವಾರ ಕರ್ನಾಟಕ ಬಂದ್, ನಂತರದ ಶನಿವಾರ ಮತ್ತು ಭಾನುವಾರ, ಸೋಮವಾರದ ಗಾಂಧಿ ಜಯಂತಿ ಎಲ್ಲ ಸೇರಿ ಈ ಬಾರಿ ವಾರಾಂತ್ಯ ದೊರೆತಿತ್ತು. ಸುದೀರ್ಘ ರಜೆ ಇರುವ ಕಾರಣ ಲಕ್ಷಾಂತರ ಮಂದಿ ಊರಿಗೆ ತೆರಳಿದ್ದರು. ಅಲ್ಲದೇ, ಹಲವೆಡೆ ಪ್ರವಾಸಕ್ಕೂ ತೆರಳಿದ್ದರು.

ಇದನ್ನೂ ಓದಿ: ನಟ ಅಭಿಷೇಕ್ ಅಂಬರೀಶ್​​ಗೆ ಬರ್ತ್​​​ಡೇ ಸಂಭ್ರಮ!

ಇಂದು ಎಂದಿನಂತೆ ಶಾಲೆ-ಕಾಲೇಜು, ಕಚೇರಿಗಳು ಆರಂಭವಾಗಿದೆ. ಹೀಗಾಗಿ ಪ್ರವಾಸಕ್ಕೆ ಹೋದವರು ಮತ್ತೆ ಕಚೇರಿಗಳಿಗೆ ಹಿಂದಿರುಗಬೇಕಾಗಿದೆ. ರಜೆ ಮುಗಿಸಿ ಬೆಂಗಳೂರಿನತ್ತ ಬರುತ್ತಿರುವ ಜನರು ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆ ಗೊರಗುಂಟೆ ಪಾಳ್ಯ ಸುತ್ತಮುತ್ತ ಟ್ರಾಫಿಕ್ ಜಾಮ್ ಕಂಡುಬಂದಿದೆ. ಈ ವೇಳೆ ಟ್ರಾಫಿಕ್‌ನಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

RELATED ARTICLES

Related Articles

TRENDING ARTICLES