Friday, September 20, 2024

2,000 ನೋಟುಗಳ ವಿನಿಮಯದ ಗಡುವು ವಿಸ್ತರಣೆ

ಬೆಂಗಳೂರು : 2,000 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಆರ್​ಬಿಐ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಅಕ್ಟೋಬರ್​ 7ರವರೆಗೆ 2,000 ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯದ ಅವಧಿಯನ್ನು ವಿಸ್ತರಿಸಿ ಆರ್​ಬಿಐ ಆದೇಶ ಹೊರಡಿಸಿದೆ. ನೋಟು ಬದಲಾಯಿಸಲು ಒಂದು ವಾರ ಅವಕಾಶ ನೀಡಿರುವುದಾಗಿ ಪ್ರಕಟಿಸಿದೆ.

ಮೇ 19ರಂದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಳ್ಳ್ಳುವುದಾಗಿ ಆದೇಶಿಸಿತ್ತು. ಈ ಹಿಂದೆ ಹೇಳಿದಂತೆ ನೋಟು ವಿನಿಮಯಕ್ಕೆ ಸೆ.30 (ಇಂದು) ಕೊನೆಯ ದಿನವಾಗಿತ್ತು. ಅಲ್ಲದೆ, ಈವರೆಗೆ ಶೇ.96 ರಷ್ಟು ಮಾತ್ರ 2,000 ನೋಟುಗಳು ತಲುಪಿದೆ. ಉಳಿದ ನೋಟುಗಳ ವಿನಿಮಯಕ್ಕೆ ಅವಧಿ ವಿಸ್ತರಿಸಿ ಆರ್​ಬಿಐ ಪ್ರಕಟಣೆ ಹೊರಡಿಸಿದೆ.

ಆರ್‌ಬಿಐ 2,000 ನೋಟುಗಳ ಠೇವಣಿ ಮತ್ತು ವಿನಿಮಯದ ದಿನಾಂಕವನ್ನು ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬಹುದು ಎಂದು ತೋರುತ್ತಿದೆ. ಏಕೆಂದರೆ ಇದು ಅನಿವಾಸಿ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಇತರರನ್ನು ಪರಿಗಣಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES