Monday, December 23, 2024

ಕೇರಳ ಈಗ ನಿಫಾ ಮುಕ್ತ; 4 ಸೋಂಕಿತರೂ ಗುಣಮುಖ!

ಕೇರಳ :  ಕೇರಳದಲ್ಲಿ ಇಬ್ಬರನ್ನು ಬಲಿಪಡೆದಿದ್ದ ನಿಫಾ ಸಾಂಕ್ರಾಮಿಕ ಮತ್ತೆ ದೇಶವನ್ನು ಆತಂಕಕ್ಕೀಡು ಮಾಡಿದ್ದ ಬೆನ್ನಲ್ಲೇ ಕೇರಳದ ನಾಲ್ವರೂ ನಿಪಾ ಸೋಂಕಿತರು ಗುಣಮುಖರಾಗಿರುವ ಸಮಾಧಾನಕರ ಸಂಗತಿ ಹೊರಬಿದ್ದಿದೆ.

ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕ ಸೇರಿದಂತೆ ನಾಲ್ವರಿಗೆ ಎರಡೆರಡು ಬಾರಿ ಪರೀಕ್ಷಿಸಲಾಗಿದ್ದು ಸೋಂಕು ನೆಗೆಟಿವ್‌ ವರದಿಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಶುಕ್ರವಾರ ತಿಳಿಸಿದ್ದಾರೆ. ಆದರೆ ಸೋಂಕು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದರಲ್ಲಿ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಅಕ್ರಮ ಸೇಂದಿ ಸಾಗಾಟ: ಅಬಕಾರಿ ಪೊಲೀಸರಿಂದ ಆರೋಪಿಗಳ ಬಂಧನ!

ಕಲ್ಲಿಕೋಟೆಯಲ್ಲಿ ಒಟ್ಟು 6 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ ಇಬ್ಬರು ಸಾವನ್ನಪ್ಪಿದ್ದರು ಹಾಗೂ ಉಳಿದ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಿದ್ದ ಕೇರಳ ಸರ್ಕಾರ ಮತ್ತು ಜಿಲ್ಲಾಡಳಿತ ಸೆ.16ರಿಂದ ಜಿಲ್ಲೆಯ ಎಲ್ಲಾ ಸಂಸ್ಥೆಗಳನ್ನು ಬಂದ್‌ ಮಾಡಿದ್ದವು. ಅಲ್ಲದೇ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿತ್ತು.

RELATED ARTICLES

Related Articles

TRENDING ARTICLES