ಬೆಂಗಳೂರು : ಕಾವೇರಿ ವಿಚಾರವಾಗಿ ಶುಕ್ರವಾರ ನಡೆದ ಕರ್ನಾಟಕ ಬಂದ್‌ನಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದ್ದರಿಂದ 5 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ.
ಇನ್ನು ಶುಕ್ರವಾರ ಒಂದೇ ದಿನ ಎಲ್ಲಾ ರೀತಿಯ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಸಂಗ್ರಹವಾಗುತ್ತಿದ್ದ 400 ಕೋಟಿ ರೂ.ಗೂ ಅಧಿಕ ತೆರಿಗೆ ಹಣಕ್ಕೆ ಹೊಡೆತ ಬಿದ್ದಿದೆ ಎಂದು FKCCI ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ತಿಳಿಸಿದರು.
ಇದನ್ನೂ ಓದಿ : ₹2000 ನೋಟು ವಾಪಸ್‌ಗೆ ಇಂದೇ ಕಡೇ ದಿನ
ಕರ್ನಾಟಕ ಬಂದ್ ಶಾಂತಿಯುತವಾಗಿ ನಡೆದಿದ್ದು, ಕರ್ನಾಟಕದಾದ್ಯಂತ ಇರುವ ನಮ್ಮ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು ಶೇ.70ರಷ್ಟು ಉದ್ಯಮಿಗಳು ಬೆಂಬಲ ನೀಡಿದ್ದಾರೆ. ಈ ಬಂದ್‌ಗೆ ಎಫ್‌ಕೆಸಿಸಿಐ ಕೂಡ ಸಂಪೂರ್ಣ ಬೆಂಬಲ ನೀಡಿದ್ದು, ಬಂದ್‌ನಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ,” ಎಂದು ವಿವರಿಸಿದ್ದಾರೆ.