Monday, December 23, 2024

ಅಕ್ರಮ ಸೇಂದಿ ಸಾಗಾಟ: ಅಬಕಾರಿ ಪೊಲೀಸರಿಂದ ಆರೋಪಿಗಳ ಬಂಧನ!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಇಲಾಖೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಭಾರಿ ಮೊತ್ತದ ಅಕ್ರಮ ಸೇಂದಿಯನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ದೇವನಹಳ್ಳಿಯ ವೆಂಕಟಾಪುರ ಮತ್ತು ಬೂದಿಗೆರೆ ಮಾರ್ಗದಲ್ಲಿ ಕಾರ್ಯಾಚರನಡೆಸಿದ ಅಬಕಾರಿ ಇಲಾಖೆ ಪೊಲೀಸರು 347 ಲೀಟರ್ ಅಕ್ರಮ ಸೇಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಂದ್​: ಸರ್ಕಾರದ ಬೊಕ್ಕಸಕ್ಕೆ ಒಂದೇ ದಿನ 5 ಸಾವಿರ ಕೋಟಿಗೂ ಹೆಚ್ಚು ನಷ್ಟ!

ಅಕ್ರಮ ಸೇಂದಿ ಸಾಗಿಸುತ್ತಿದ್ದ ಆರೋಪಿಗಳು ಆಂಧ್ರದಿಂದ ಕರ್ನಾಟಕಕ್ಕೆ ಸಾಗಾಣಿಕೆ ಮಾಡುತ್ತಿದ್ದರು. ದೇವನಹಳ್ಳಿ ಅಬಕಾರಿ ನಿರೀಕ್ಷಕ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ ಆರೋಪಿಗಳನ್ನು ಮತ್ತು ಸೇಂದಿ ಸಾಗಾಣಿಕೆ ಬಳಸಿದ್ದ ತ್ರಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES