Wednesday, January 22, 2025

ಸಾಹಿತಿಗಳಿಗೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್!

ದಾವಣಗೆರೆ : ಸಾಹಿತಿಗಳಿಗೆ ಸಾಲು ಸಾಲು ಬೆದರಿಕೆ ಪತ್ರ ಬರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಚಾಲೆಂಜ್ ಅಗಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಪತ್ರಗಳನ್ನು ಬರೆದಿದ್ದವನು ದಾವಣಗೆರೆ ಮೂಲದ ಶಿವಾಜಿ ರಾವ್ ಎಂಬಾತನಾಗಿದ್ದು, ಇದೀಗ ಪೊಲೀಸರ ಸೆರೆಯಲ್ಲಿದ್ದಾನೆ. ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಶಿವಾಜಿ ರಾವ್, ಹಿಂದೂ ಧರ್ಮವನ್ನು ಟೀಕಿಸಿ ಮಾತನಾಡುವವರು ಹಾಗೂ ಬರೆಯುವವರನ್ನು ಟಾರ್ಗೆಟ್ ಮಾಡಿದ್ದ ಎಂದು ಗೊತ್ತಾಗಿದೆ.

ಇದನ್ನೂ ಓದಿ: ₹2000 ನೋಟು ವಾಪಸ್‌ಗೆ ಇಂದೇ ಕಡೇ ದಿನ

ಪತ್ರಗಳನ್ನು ಬೇರೆ ಬೇರೆ ಪೋಸ್ಟ್ ಅಫೀಸ್‌ಗಳಿಂದ ರವಾನೆ ಮಾಡುತ್ತಿದ್ದ ಈತ ಹಲವು ದಿನಗಳಿಂದ ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

RELATED ARTICLES

Related Articles

TRENDING ARTICLES