Wednesday, January 22, 2025

ಕೌಟುಂಬಿಕ ಕಲಹ : ಒಂದು ಎಕರೆ ಅಡಿಕೆ ತೋಟ ನಾಶ

ಚಿಕ್ಕಮಗಳೂರು : ಕುಟುಂಬ ದ್ವೇಷಕ್ಕೆ ಒಂದು ಎಕರೆ ಅಡಿಕೆ ತೋಟವನ್ನ ನಾಶ ಮಾಡಿರುವ ಘಟನೆ ಚಿಕ್ಕಮಗಳೂರಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ನಡುವೆ ಆಸ್ತಿಗಾಗಿ ಗಲಾಟೆಯಾಗಿದ್ದು, 400 ಅಡಿಕೆ ಗಿಡಗಳನ್ನ ನಾಶ ಮಾಡಿದ್ದಾರೆ. ಪಿಳ್ಳೇನಹಳ್ಳಿ ಗ್ರಾಮದ ಮಹೇಶ್ ನಾಯ್ಕ ಎಂಬುವವರಿಗೆ ಸೇರಿದ ಅಡಿಕೆ ತೋಟಕ್ಕೆ ರಾತ್ರೋರಾತ್ರಿ ನುಗ್ಗಿದ ಕಿಡಿಗೇಡಿಗಳು ಮೂರು ವರ್ಷದ 400 ಅಡಿಕೆ ಗಿಡಗಳನ್ನ ಕಡಿದು ಹಾಕಿದ್ದಾರೆ.

ಮಹೇಶ್ ನಾಯ್ಕ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಳ್ಳೇನಹಳ್ಳಿ ಗ್ರಾಮದ ಶಂಕರ್ ನಾಯಕ, ರವಿ ನಾಯಕ, ಧನ್ ಪಾಲ್ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES