Sunday, December 22, 2024

ಪಾಪ..! ತರಗತಿಯಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಗುಜರಾತ್ : ಶಾಲೆಯೊಂದರ ಕ್ಲಾಸ್​ರೂಮ್​ನಲ್ಲೇ (ತರಗತಿ) 8ನೇ ತರಗತಿಯ ವಿದ್ಯಾರ್ಥಿನಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.

ತರಗತಿಯ ಬೆಂಚ್​ ಮೇಲೆ ಕುಳಿತಿದ್ದ 12 ವರ್ಷದ ವಿದ್ಯಾರ್ಥಿನಿ ರಿದ್ಧಿ ಮೇವಾಡ ದಿಢೀರನೆ ನೆಲಕ್ಕೆ ಬಿದ್ದಿದ್ದಾಳೆ. ಈ ವೇಳೆ ಶಿಕ್ಷಕರು ಹಾಗೂ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಕೂಡಲೇ ಶಿಕ್ಷಕರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯ ತಪಾಸಣೆ ನಡೆಸಿದ್ದಾರೆ. ದುರಾದೃಷ್ಟವಶಾತ್ ಅಷ್ಟರಲ್ಲಗಲೇ ವಿದ್ಯಾರ್ಥಿನಿ ಕೊನೆಯುರಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕ್ಲಾಸ್​ರೂಮ್​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಮಗಳ ಹಠಾತ್ ಸಾವಿನಿಂದ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಈ ಘಟನೆ ತರಗತಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತರಗತಿಯಲ್ಲಿದ್ದ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಘಟನೆಯ ಕುರಿತು ಪೊಲೀಸರು ಅನಿರೀಕ್ಷಿತ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES