ಬೆಂಗಳೂರು : ನಾಳೆ ಕೆಲವು ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ಬೆಂಗಳೂರು ನಗರದಲ್ಲಿ ಯಾವುದೇ ರ್ಯಾಲಿ ಹಾಗು ಪ್ರತಿಭಟನೆಗಳಿಗೆ ಅವಕಾಶ ಇಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಂದು ಮಧ್ಯರಾತ್ರಿ 12 ರಿಂದ 29ರ ರಾತ್ರಿ ಮಧ್ಯರಾತ್ರಿ ವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರ ಕುರಿತು ಎಲ್ಲಾ ಸಂಘಟನೆಗಳಿಗೂ ಮಾಹಿತಿ ನೀಡಿದ್ದು ನೋಟೀಸ್ ಕೂಡ ಕಳಿಸಲಾಗಿದೆ ಎಂದರು.
ಇದನ್ನೂ ಓದಿ: ನಿತ್ಯ ಮೆನನ್ ವಿರುದ್ದ ಸುಳ್ಳು ಸುದ್ದಿ ಪೋಸ್ಟ್ : ನಿತ್ಯ ಗರಂ!
ಬಂದ್ ಆಚರಣೆ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯವು 1997 ರಲ್ಲೇ ಸಾರ್ವಜನಿಕ ಜೀವನವನ್ನು ಅಸ್ಥವ್ಯಸ್ಥಗೊಳಿಸುವ ಬಂದ್ ಕಾನೂನು ಬಾಹಿರ ಎಂದು ಹೇಳಿದೆ. ಇದರ ಆದಾರದಲ್ಲಿ ನಾಳೆ ನಡೆಯಲಿರುವ ಬಂದ್ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ನಾಳೆ ನಡೆಯಲಿರುವ ಕರ್ನಾಟಕ ಬಂದ್ ವೇಳೆ ಅಂಗಡಿ ಮಾಲೀಕರು ತಾವೇಗಿಯೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರೇ ತೊಂದರೆ ಇಲ್ಲ. ಆದರೇ, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಾಗಿಸುವುದು ಎಂದು ಅವರು ಹೇಳಿದ್ದಾರೆ.
ಪೊಲೀಸ್ ಬಿಗಿ ಬಂದೋಬಸ್ತ್:
ಕರ್ನಾಟಕ ಬಂದ್ ಹಿನ್ನೆಲೆ ನಾಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್ಆರ್ಪಿ, ಸಿಆರ್ಪಿ ತುಕಡಿಗಳು ಮತ್ತು ಹೋಂಗಾರ್ಡ್ಗಳನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.