ಬೆಂಗಳೂರು : ನಾಳೆ ನಡೆಯಲಿರು ಕರ್ನಾಟಕ ಬಂದ್ ಹಿನ್ನೆಲೆ ಬಿಎಂಟಿಸಿ ಹಾಗು ಕೆಎಸ್ಆರ್ಟಿಸಿ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಮೌಕಿಕವಾಗಿ ಆದೇಶಿಸಿದೆ.
ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ನಾಳೆ, ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ನಡೆಸಲು ಹಲವು ಸಂಘಟನೆಗಳು ತೀರ್ಮಾನಿಸಿರುವ ಹಿನ್ನೆಲೆ ನಾಳೆ ಬಂದ್ ಗೆ ಕೆಎಸ್ಆರ್ಟಿಸಿ ಹಾಗು ಬಿಎಂಟಿಸಿ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದೆ. ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎನ್ನುವ ಮೂಲಕ ಶಿಸ್ತು ಕ್ರಮದ ಹೆಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕರ್ನಾಟಕ ಬಂದ್ಗೆ ನೂರಾರು ಸಂಘಟನೆಗಳು ಸಾಥ್!
ಕಾವೇರಿ ನೀರಿಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್ ನಡಯುತ್ತಿದ್ದರೂ KSRTC, BMTC ನೌಕರರಿಗೆ ಕಡ್ಡಾಯ ಹಾಜರಾತಿಗೆ ಇಲಾಖೆ ಸೂಚನೆ ನೀಡಿದ್ದು ನಾಳೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು
ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ಉಳಿದ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅನಗತ್ಯವಾಗಿ ನಾಳೆ ರಜೆ ತೆಗೆದುಕೊಂಡರೇ ಅಂತವರ ವಿರುದ್ದ ಶಿಸ್ತು ಕ್ರಮವನ್ನು ಆಯಾ
ಸಾರಿಗೆ ನಿಗಮಗಳಿಂದ ತೆಗೆದುಕೊಳ್ಳುವಂತೆ ಮೌಖಿಕ ಸೂಚನೆ ನೀಡಿಲಾಗಿದೆ. ನಾಳಿನ ಕರ್ನಾಟಕ ಬಂದ್‌ನಲ್ಲಿ ಯಾರೂ ಭಾಗವಹಿಸುವಂತಿಲ್ಲ ಎಂದು ಸೂಚನೆ ನೀಡಿದೆ.