Sunday, December 22, 2024

ಕರ್ನಾಟಕ ಬಂದ್​​ಗೆ ನೂರಾರು ಸಂಘಟನೆಗಳು ಸಾಥ್!

ಬೆಂಗಳೂರು : ಕಾವೇರಿಗಾಗಿ ನಾಳೆ ಅಖಂಡ ಕರ್ನಾಟಕ ಬಂದ್ ಆಗಲಿದ್ದು, ಕರ್ನಾಟಕ ಬಂದ್​​ಗೆ ರಾಜ್ಯಾದ್ಯಂತ ನೂರಾರು ಸಂಘಟನೆಗಳು ಸಾಥ್ ನೀಡಿವೆ.

ಬೆಂಗಳೂರು ಬಂದ್​​ಗೆ ಬೆಂಬಲ ನೀಡಿದ ಬಹುತೇಕ ಸಂಘಟನೆಗಳು ಕರ್ನಾಟಕ ಬಂದ್​​ಗೆ ಬೆಂಬಲ ನೀಡಿವೆ. ನಾಳೆ ಬೆಂಗಳೂರಿನ ಟೌನ್ ಹಾಲ್​​ನಿಂದ ಫ್ರೀಡಂ ಪಾರ್ಕ್​​ವರೆಗೆ ರ್ಯಾಲಿ ನಡೆಸಲಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್, ರೈಲು ಬಂದ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ರೈತರ ಭೂಮಿ ವಾಪಸ್ ಕೊಡಿಸದಿದ್ದರೆ ಸಿಂಗೂರು ಮಾದರಿ ಹೋರಾಟ : ಹೆಚ್​.ಡಿ ಕುಮಾರಸ್ವಾಮಿ

ಇತ್ತ ಬಿಜೆಪಿ ಹಾಗೂ ಜೆಡಿಎಸ್ ವಿಧಾನಸೌಧದಲ್ಲಿ ಪ್ರತಿಭಟಿಸೋ ಮೂಲಕ ಕಾವೇರಿ ಹೋರಾಟಕ್ಕೆ ಸಾಥ್ ನೀಡಿವೆ. ಕರ್ನಾಟಕ ಬಂದ್​​ಗೆ ರೈತ ಮುಂಖಡ ಕುರುಬೂರು ಶಾಂತ್ ಕುಮಾರ್ ಹಾಗೂ AAP ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಾಥ್ ಕೊಡ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

RELATED ARTICLES

Related Articles

TRENDING ARTICLES