Wednesday, January 22, 2025

ಕರ್ನಾಟಕ ಬಂದ್​ ಗೆ ತಮಿಳು ಸಂಘಟನೆಗಳ ಒಕ್ಕೂಟ ಬೆಂಬಲ!

ಮೈಸೂರು : ನಾಳೆ ಕರ್ನಾಟಕ ಬಂದ್​ ಹಿನ್ನೆಲೆ ಮೈಸೂರು ತಮಿಳು ಸಂಘಟನೆಗಳ ಒಕ್ಕೂಟವು ಬಂದ್​ ಗೆ ಬೆಂಬಲವನ್ನು ಸೂಚಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರಘುಪತಿ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಕನ್ನಡ ನಾಡಿನ ನೆಲ ಜಲದ ವಿಚಾರವಾಗಿ ಸದಾ ಅವರ ಜೊತೆ ಇರಲಿದ್ದೇವೆ, ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಟ್ಟಿದ್ದೇವೆ ಈಗ ನಮ್ಮ ಬಳಿಯೇ ನೀರು ಇಲ್ಲ ಈ ಪರಿಸ್ಥಿತಿಯಲ್ಲಿ ನೀರು ಕೊಡಲು ಸಾಧ್ಯವಿಲ್ಲ, ಇದನ್ನು ತಮಿಳುನಾಡಿನಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಸಂಸದರ ವಿರುದ್ದ ಕರವೇ ಮಹಿಳಾ ಘಟಕದಿಂದ ಪ್ರತಿಭಟನಾ ರ್ಯಾಲಿ!

ನಾವು ಹಿಂದಿನಿಂದಲೂ ಸದಾ ಕರ್ನಾಟಕದ ಪರ ಇದ್ದೇವೆ ಇರುತ್ತೇವೆ, ಬರಗಾಲ ಬಂದಾಗ ಈ ರೀತಿ ಪರಿಸ್ಥಿತಿ ಬರುತ್ತದೆ ಇದಕ್ಕೆ ಶಾಶ್ವತವಾದ ಪರಿಹಾರ ಸರ್ಕಾರ ಕಂಡುಕೊಳ್ಳಬೇಕು ಮತ್ತು ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

RELATED ARTICLES

Related Articles

TRENDING ARTICLES