Sunday, December 22, 2024

ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ: ಬಿ.ವೈ.ವಿಜಯೇಂದ್ರ

ಬೆಂಗಳೂರು :  ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮಿಳುನಾಡು ಮೂರನೇ ಬೆಳೆ ಬೆಳೆಯಲು ನೀರು ಉಪಯೋಗ ಮಾಡಿದಾಗ ಎಚ್ಚರಿಕೆ ವಹಿಸಬೇಕಿತ್ತು. ಇದಕ್ಕೆ ಆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಬೇಕಿತ್ತು. ಆದರೆ ಮೂರನೇ ಬೆಳೆಗೆ ಒಂದು ಟಿಎಂಸಿ ಉಪಯೋಗ ಮಾಡ್ತಿದೆ. ಇದನ್ನು ಸುಪ್ರೀಂ ಕೋರ್ಟ್​​​​ಗೆ ಮನವರಿಕೆ ಮಾಡಬೇಕಿತ್ತು. ಇವಾಗ ನೀರು ಖಾಲಿ ಆಗಿದೆ, ಕುಡಿಯುವ ನೀರಿನ ಸಮಸ್ಯೆ ಆಗ್ತಿದೆ.

ಇದನ್ನೂ ಓದಿ: ಬಾಗ್​ ಮನೆ ಟೆಕ್​ಪಾರ್ಕ್​ ಸೇರಿ 5 ಕಡೆ ಐಟಿ ಅಧಿಕಾರಿಗಳು ಧಾಳಿ!

ಒಟ್ಟಾರೆ ರಾಜ್ಯ ಸರ್ಕಾರ ರಾಜಕೀಯ ಮಾಡ್ತಿದೆ. ಪ್ರಾಮಾಣಿಕ ಕೆಲಸ ಮಾಡ್ತಿಲ್ಲ, ಇದು ದುರದೃಷ್ಟಕರ. ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹ ಮಾಡುವುದು ಸಿಎಂಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES