ಇರಾಕ್ : ಉತ್ತರ ಇರಾಕ್‌ನ ಹಮ್ದನಿಯಾಹ್ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮದುವೆ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾನೆ ಮಾಹಿತಿ ನೀಡಿದ್ದಾರೆ.
ಮೊಸುಲ್ ನಗರದ ಹಮ್ದನಿಯಾ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಹಾಲ್‌ನಲ್ಲಿ ಮದುವೆ ಪಾರ್ಟಿ ನಡೆಯುತ್ತಿತ್ತು. ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಇದೇ ವೇಳೆ ಒಂದು ಕಡೆ ಅಗ್ನಿಯ ಸ್ಪರ್ಶವಾಗಿದೆ. ಇದಾಗುತ್ತಲೇ ಇಡೀ ಮದುವೆ ಹಾಲ್‌ಗೆ ಬೆಂಕಿ ಆವರಿಸಿದೆ.
ಇದನ್ನೂ ಓದಿ : ತಮಿಳುನಾಡಿಗೆ ಮತ್ತೆ ನೀರು: ಪ್ರಾಧಿಕಾರದ ಆದೇಶ ಪ್ರಶ್ನಿಸಿ ಮೇಲ್ಮನವಿಗೆ ತಜ್ಞರೊಂದಿಗೆ ಚರ್ಚೆ!-ಸಿಎಂ
ಕೂಡಲೇ ಕಿರುಚಾಡುತ್ತ ಜನ ಹೊರಗೆ ಬರಲು ಯತ್ನಿಸಿದರಾದರೂ ಬಹುತೇಕ ಮಂದಿ ಅಗ್ನಿ ಕೆನ್ನಾಲಗೆಗೆ ಸಿಲುಕಿದರು. ಇಡೀ ಕಲ್ಯಾಣ ಮಂಟಪ ಸುಟ್ಟು ಕರಕಲಾಗಿದ್ದು, ಬಹುತೇಕ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.