Tuesday, January 7, 2025

ನೆಟ್ಟಿಗರಿಗೆ ಆಹಾರವಾದ ಚಕ್ರವರ್ತಿ ಸೂಲಿಬೆಲೆ!

ಬೆಂಗಳೂರು :  ಸಿಎಂ ಸಿದ್ದರಾಮಯ್ಯರನ್ನು ನಿಂದಿಸಿ ಚಕ್ರವರ್ತಿ ಸೂಲಿಬೆಲೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದೆ. ರಾಜಕಾರಣ, ದ್ವೇಷ ಮರೆತು ಎಲ್ಲರೂ ಒಂದಾಗಿ ಕಾವೇರಿ ನೀರನ್ನು ಉಳಿಸಿಕೊಳ್ಳಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಕಾವೇರಿ ಹೋರಾಟದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ನಿಂದಿಸಿ ಎಕ್ಸ್​ ಖಾತೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಹಾಕಿದ್ದ ಪೋಸ್ಟ್ ಈಗ ಅವರಿಗೆಯೇ ತಿರುಗು ಬಾಣವಾಗಿದೆ.

ಇದನ್ನೂ ಓದಿ: 3.5 ಕೆ.ಜಿ ಚಿನ್ನ, 10 ಲಕ್ಷ ನಗದು ಕಳ್ಳತನ!

ಸೂಲಿಬೆಲೆ ಅವರನ್ನು ಬೆಂಬಲಿಸುತ್ತಿದ್ದ ಅವರ ಅಭಿಮಾನಿಗಳೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ‘ಸಿದ್ರಾಮ’ ಹೆಸರನ್ನು ಹಿಂಬದಿಯಿಂದ ಓದಿದರೆ ಗೊತ್ತಾಗುತ್ತೆ ಸಿದ್ದರಾಮಯ್ಯ ಯಾಕೆ ತಮಿಳುನಾಡಿಗೆ ನೀರು ಬಿಟ್ಟರು ಎಂದು ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದಾರೆ.

ಸಿದ್ರಾಮ ಎಂಬುದನ್ನು ಹಿಂಬದಿಯಿಂದ ಓದಿದರೆ ಮದ್ರಾಸಿ ಎಂಬಂತಾಗುತ್ತದೆ ಎಂದು ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು ಹಿಗ್ಗಾಮಗ್ಗಾ ಜಾಡಿಸಿದ್ದಾರೆ. ಸೂಲಿಬೆಲೆ ಟ್ವೀಟ್​ಗೆ ಹಲವರು ಆಕ್ರೋಶಗೊಂಡಿದ್ದಾರೆ.

RELATED ARTICLES

Related Articles

TRENDING ARTICLES