Wednesday, January 22, 2025

ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ: ವಾಟಾಳ್ ನಾಗರಾಜ್​!

ಬೆಂಗಳೂರು :  ರಜನಿಕಾಂತ್ ಕರ್ನಾಟಕಕ್ಕೆ ಬರಬಾರ್ದು. ಕನ್ನಡದ ನೀರನ್ನ ಕುಡಿದಿದ್ದರೆ ಅಲ್ಲಿ ರಜನಿಕಾಂತ್ ಮಾತನಾಡ್ಬೇಕು ಅಂತಾ ನಟ ರಜನಿಕಾಂತ್ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್​​​ ನಾಗರಾಜ್​​ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ ಅಂತಾ ಆಕ್ರೋಶ ಹೊರಹಾಕಿದ್ರು. ಇನ್ನು ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳಿಂದ ಬಂದ್​ಗೆ ಬೆಂಬಲ ಸಿಗ್ತಿದೆ
ಸಿದ್ದರಾಮಯ್ಯನವರು ಮಾತ್ರ ಬಾಯಿ ಬಿಡ್ತಿಲ್ಲ.

ಇದನ್ನೂ ಓದಿ : ಕರ್ನಾಟಕ ಬಂದ್​ಗೆ ಬೆಂಬಲ ನೀಡಿದ ಚಿತ್ರರಂಗ!

ಡಿಸಿಎಂ ಡಿಕೆಶಿ ಮಂತ್ರಿಯಾದ್ಮೇಲೆ ಸರ್ವಾಧಿಕಾರಿಯಾಗಿದ್ದಾರೆ, ನಮ್ಮಲ್ಲಿ ಯಾರು ಮಾತನಾಡೋಲ್ಲ. ಆದ್ರೆ ತಮಿಳುನಾಡಲ್ಲಿ ಸರ್ಕಾರ ಬೆಂಬಲಿಸುತ್ತೆ ಆದ್ರೆ ನಮ್ಮಲ್ಲಿ ಸುಮ್ಮನಾಗ್ತಾರೆ ಅಂತಾ ಹೇಳಿದ್ರು.

RELATED ARTICLES

Related Articles

TRENDING ARTICLES